ಪೆಟ್ರೋಲ್‌ ಪಂಪ್‌ ಸಿಬಂದಿಯಿಂದ 7 ಲಕ್ಷ ಲೂಟಿ

Team Udayavani, Dec 2, 2019, 10:21 PM IST

ಸಾಂದರ್ಭಿಕ ಚಿತ್ರ

ಗಯಾ: ಇಲ್ಲಿನ ಗನ್‌ ಪಾಯಿಂಟ್‌ ಬಳಿಕ ಪೆಟ್ರೋಲ್‌ ಪಂಪ್‌ವೊಂದರಿಂದ 7 ಲಕ್ಷ ರೂ. ಲೂಟಿ ಮಾಡಿದ ಘಟನೆ ವರದಿಯಾಗಿದೆ.

ಬಿಹಾರದ ಗಯಾನದ ಪೆಟ್ರೋಲ್‌ ಪಂಪ್‌ನ ಸಿಬಂದಿ ಇಬ್ಬರು 7 ಲಕ್ಷ ರೂ.ಗಳನ್ನು ಬ್ಯಾಂಕ್‌ಗೆ ಠೇವಣಿ ಮಾಡಲು ತೆರಳುತ್ತಿರುವಾಗ ಬೈಕ್‌ನಲ್ಲಿ ಬಂದ 5 ಕಿರಾತಕರು ಇವರಿಂದ ನಗದನ್ನು ಅಪಹರಿಸಿದ್ದಾರೆ. ಇಬ್ಬರು ಹೋಗುತ್ತಿದ್ದ ಬೈಕ್‌ ಅನ್ನು ನಿಲ್ಲಿಸಿ ಅದರಲ್ಲಿದ್ದವರನ್ನು ಹೊಡೆದು ಬೀಳಿಸಿ ಹಣವನ್ನು ದೋಚಲಾಗಿದೆ.

ಹಣದ ಚೀಲವನ್ನು ಕಿತ್ತುಕೊಳ್ಳಲು ಬಂದ 5 ಜನರ ವಿರುದ್ಧ ಪ್ರತಿರೋಧ ತೋರಿದ ಪೆಟ್ರೋಲ್‌ ಪಂಪ್‌ ಸಿಬಂದಿಗಳನ್ನು ಗನ್‌ ತೋರಿಸಿ ಅವರು ಬೆದರಿಸಿದ್ದಾರೆ. ತಡೆಯಲು ಬಂದ ಸಾರ್ವಜನಿಕರನ್ನು ಗದರಿಸಲು ದುಷ್ಕರ್ಮಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ