ಭಾರತೀಯ ವಾಯುಗಡಿ ಬಲಗೊಳಿಸುವತ್ತ ರಾವತ್ ಹೆಜ್ಜೆ
Team Udayavani, Jan 2, 2020, 8:42 PM IST
– ಜೂ. 30ರೊಳಗೆ ನೀಲನಕ್ಷೆ ತಯಾರಿಸುವಂತೆ ಸೂಚನೆ
ನವದೆಹಲಿ: ಭಾರತೀಯ ವಾಯುಗಡಿಯನ್ನು ಮತ್ತಷ್ಟು ಶಕ್ತಿಶಾಲಿಗೊಳಿಸುವ ನಿಟ್ಟಿನಲ್ಲಿ ಜೂ.30ರೊಳಗೆ ಒಂದು ನಿರ್ದಿಷ್ಟವಾದ ನೀಲನಕ್ಷೆಯೊಂದನ್ನು ತಯಾರಿಸುವಂತೆ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್) ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಿಪಿನ್ ರಾವತ್, ಆದೇಶಿಸಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಆದೇಶ.
ಇದಲ್ಲದೆ, ಭಾರತೀಯ ವಾಯುಗಡಿಯೊಳಗಿನ ಕೆಲವು ಪ್ರದೇಶಗಳಲ್ಲಿ ಮೂರೂ ಪಡೆಗಳ ಸಹಭಾಗಿತ್ವದ ಕಾವಲು ಹಾಗೂ ಜಂಟಿ ಹೋರಾಟ ಅನಿವಾರ್ಯವಿದೆ. ಅಂಥ ವಲಯಗಳನ್ನು ಗುರುತು ಮಾಡಿ ಅಲ್ಲಿ ಮೂರೂ ಪಡೆಗಳ ಪ್ರತಿನಿಧಿಗಳು ದಿನದ 24 ಗಂಟೆಯೂ ಸೇವೆಗೆ ಲಭ್ಯವಿರುವಂಥ ವ್ಯವಸ್ಥೆಯನ್ನು ಜಾರಿಗೆ ತರಲು ರಾವತ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಹೀಗೆ, ತ್ರಿವಳಿ ಪಡೆಗಳ ಸಹಭಾಗಿತ್ವಕ್ಕೆ ಪೂರಕವಾಗಿ ಯಾವ ಕ್ರಮಗಳನ್ನು ಮೂರೂ ಪಡೆಗಳು ಕೈಗೊಳ್ಳಬಹುದು ಎಂಬುದರ ಪ್ರಸ್ತಾವನೆಗಳನ್ನು ಸಲ್ಲಿಸಲು ಮೂರು ಪಡೆಗಳಿಗೆ ಡಿ. 31ರ ಗಡುವನ್ನು ರಾವತ್ ವಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪ್ರಧಾನಿಯನ್ನು ಒತ್ತಾಯಿಸಿದ ರಾಜ್ ಠಾಕ್ರೆ
ಅಸ್ಸಾಂನಲ್ಲಿ ಪೊಲೀಸ್ ಠಾಣೆಗೆ ಬೆಂಕಿ: ದುಷ್ಕರ್ಮಿಗಳ 5 ಮನೆಗಳು ನೆಲಸಮ
ಲೂಧಿಯಾನ ಬಾಂಬ್ ಸ್ಫೋಟ ಪ್ರಕರಣ ಭೇದಿಸಿದ ಎನ್ಐಎ; ಪ್ರಮುಖ ಆರೋಪಿಯ ಬಂಧನ
ಮರಕ್ಕೆ ಢಿಕ್ಕಿ ಹೊಡೆದ ಕಾರು: ಗೋವಾದಲ್ಲಿ ಬೆಳಗಾವಿ ಮೂಲದ ಮೂವರು ಸಾವು
ನಿಂತಿದ್ದ ಟ್ರಕ್ ಗೆ ಢಿಕ್ಕಿ ಹೊಡೆದ ಎಸ್ ಯುವಿ: ಮದುವೆ ಮನೆಯಿಂದ ಬರುತ್ತಿದ್ದ 8 ಮಂದಿ ಸಾವು!