ಏರ್ಇಂಡಿಯಾ ಎಕ್ಸ್ಪ್ರೆಸ್ ಕಾಕ್ಪಿಟ್ನಲ್ಲಿ ಹಕ್ಕಿ ಪತ್ತೆ!
Team Udayavani, Jul 17, 2022, 10:13 PM IST
ನವದೆಹಲಿ: ಏರ್ಇಂಡಿಯಾ ಎಕ್ಸ್ಪ್ರೆಸ್ನ ಬಹ್ರೈನ್ನಿಂದ ಕೊಚ್ಚಿಗೆ ಆಗಮಿಸುತ್ತಿದ್ದ ವಿಮಾನದ ಕಾಕ್ಪಿಟ್ನಲ್ಲಿ ಜೀವಂತ ಹಕ್ಕಿ ಕಂಡುಬಂದಿದೆ.
ಭೂಮಿಯಿಂದ 37 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ, ಕಾಕ್ಪಿಟ್ನ ಡೆಕ್ನ ಕೆಳಭಾಗದಲ್ಲಿ ಹಕ್ಕಿ ಇದ್ದದ್ದು ಪತ್ತೆಯಾಗಿದೆ.
ವಿಮಾನ ಸುರಕ್ಷಿತವಾಗಿ ಕೊಚ್ಚಿಯಲ್ಲಿ ಲ್ಯಾಂಡ್ ಆಗಿದೆ ಮತ್ತು ಹಕ್ಕಿಯನ್ನು ಹೊರಬಿಡಲಾಗಿದೆ. ಈ ಎರಡೂ ಘಟನೆಗಳ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ.