ಬಿಟ್ಕಾಯಿನ್ ಕಳ್ಳತನ: ದೂರು
Team Udayavani, Apr 14, 2018, 7:00 AM IST
ನವದೆಹಲಿ: ಭಾರತದಲ್ಲಿ ಬಿಟ್ಕಾಯಿನ್ (ಡಿಜಿಟಲ್ ಕರೆನ್ಸಿ) ವಿನಿಮಯ ವ್ಯವಹಾರ ನಡೆಸುತ್ತಿರುವ ಹಾಗೂ ಆ ಕ್ಷೇತ್ರದಲ್ಲಿ ದೈತ್ಯ ಕಂಪನಿಯಾದ “ಕಾಯಿನ್ಸೆಕ್ಯೂರ್’ನ ಡಿಜಿಟಲ್ ವ್ಯಾಲೆಟ್ನಿಂದ ಸುಮಾರು 19 ಕೋಟಿ ರೂ. ಮೌಲ್ಯದಷ್ಟು ಬಿಟ್ಕಾಯಿನ್ ಕಳುವಾಗಿದೆ ಎಂದು ಸಂಸ್ಥೆ ಪ್ರಕಟಿಸಿದೆ.
ತನ್ನ ಜಾಲತಾಣದ ಮುಖಪುಟದಲ್ಲೇ ಈ ವಿಚಾರ ಪ್ರಕಟಿಸಿರುವ ಸಂಸ್ಥೆ, ಈ ಕಳುವಿಗೆ ತನ್ನಲ್ಲಿ ಸಿಎಸ್ಒ ಆಗಿ ಸೇವೆ ಸಲ್ಲಿಸುತ್ತಿರುವ ಅಮಿತಾಭ್ ಸೆಕ್ಸೇನಾ ಅವರೇ ಕಾರಣ ಎಂದು ದೂರಿದೆ. ದೆಹಲಿ ಸೈಬರ್ ಕ್ರೈಂ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಅಮಿತಾಭ್ ಸೆಕ್ಸೇನಾ ಅವರು, ಕಂಪನಿಯ ವ್ಯಾಲೆಟ್ನಿಂದ 438.318 ಬಿಟ್ಕಾಯಿನ್ಗಳು (19 ಕೋಟಿ ರೂ. ಮೌಲ್ಯದ) ಕಳುವಾಗಿವೆ ಎಂದು ಏ. 8ರಂದು ಸಂಸ್ಥೆಗೆ ತಿಳಿಸಿದ್ದಾರೆ. ಇದಕ್ಕೆ ಸೈಬರ್ ಆಕ್ರಮಣ ಎಂದೂ ಅವರು ತಿಳಿಸಿದ್ದಾರೆ. ಆದರೆ, ಕಂಪನಿಗೆ ಸೆಕ್ಸೇನಾ ಅವರ ಮೇಲೆಯೇ ಅನುಮಾನವಿದೆ ಎಂದು “ಕಾಯಿನ್ಸೆಕ್ಯೂರ್’ ಹೇಳಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಕಾರ್ಲಾ, ಸೆಕ್ಸೇನಾ ಅವರು ದೇಶಬಿಟ್ಟು ಓಡಿಹೋಗುವ ಅಪಾಯವಿದ್ದು, ಕೂಡಲೇ ಅವರ ಪಾಸ್ಪೋರ್ಟ್ ವಶಕ್ಕೆ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ