ಸಾಕ್ಷ್ಯದ ಬ್ಯಾಗ್ ಹೊತ್ತೂಯ್ದ ಕೋತಿ!
Team Udayavani, May 6, 2022, 6:55 AM IST
ಜೈಪುರ: “ನಾವು ಆರೋಪಿಯನ್ನು ಬಂಧಿಸಿದ್ದೇವೆ. ಆದರೆ ಗೌರವಾನ್ವಿತ ನ್ಯಾಯಾಧೀಶರೇ, ಆತನ ವಿರುದ್ಧ ಇರುವ ಸಾಕ್ಷ್ಯಗಳಿರುವ ಬ್ಯಾಗ್ ಅನ್ನು ಕೋತಿ ಸೆಳೆದುಕೊಂಡು ಓಡಿದೆ’ ಹೀಗೆಂದು ರಾಜಸ್ಥಾನ ರಾಜಧಾನಿ ಜೈಪುರದ ಚಂದ್ವಾಜಿ ಠಾಣೆ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಅರಿಕೆ ಮಾಡಿ ಕೊಂಡಿದ್ದಾರೆ.
2016ರಲ್ಲಿ ನಡೆದಿದ್ದ ಹತ್ಯೆ ಪ್ರಕ ರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಹುಲ್ ಕಂಡೇರಾ ಮತ್ತು ಮೋಹನ್‌ಲಾಲ್ ಕಂಡೇರಾ ಎಂಬುವರನ್ನು ಬಂಧಿಸಿದ್ದರು. ಅವರನ್ನು ಬಂಧಿಸಿ ಜೈಪುರದ ಕೋರ್ಟ್‌ಗೆ ತರುತ್ತಿದ್ದರು. ಜತೆಗೆ ಕೊಲೆ ಮಾಡಲು ಬಳಸಿದ್ದ ಚೂರಿ ಸೇರಿದಂತೆ 15 ವಸ್ತುಗಳನ್ನು ಸಾಕ್ಷ್ಯ ಗಳೆಂದು ಪರಿಗಣಿಸಿ ಬ್ಯಾಗೊಂದರಲ್ಲಿ ಇರಿಸಿ ತರಲಾಗುತ್ತಿತ್ತು. ಆದರೆ ಅದನ್ನು ಕೋರ್ಟ್ ಆವರಣದಲ್ಲಿದ್ದ ಮರದ ಕೆಳಗೆ ಇರಿಸಲಾಗಿತ್ತು. ಬಂಧಿತರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ ಸಂದರ್ಭದಲ್ಲಿ ಸಾಕ್ಷ್ಯಗಳನ್ನು ಹಾಜರುಪಡಿಸಲು ಪೊಲೀಸರಿಗೆ ಸೂಚಿಸಿದರು.
ಪೊಲೀಸರು ಮರಳಿ ಬಂದು ನೋಡುವಷ್ಟರಲ್ಲಿ ಬ್ಯಾಗನ್ನು ಮಂಗ ಹೊತ್ತುಕೊಂಡು ಹೋಗಿತ್ತು. ಅದನ್ನೇ ನ್ಯಾಯಾಧೀಶರಿಗೆ ಅರಿಕೆ ಮಾಡಿದರು. ಇದೀಗ ಸಾಕ್ಷ್ಯನಾಶ ಆರೋಪ ಯಾರ ಮೇಲೆ ಬರಲಿದೆ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ