ಬಂಗಾಲದವರೇ ಸಿಎಂ: ಬಿಜೆಪಿ ಸಿಎಂ ಅಭ್ಯರ್ಥಿ ಕುತೂಹಲಕ್ಕೆ ಸಚಿವ ಅಮಿತ್‌ ಶಾ ತೆರೆ

Team Udayavani, Dec 21, 2020, 1:32 AM IST

ಬಂಗಾಲದವರೇ ಸಿಎಂ: ಬಿಜೆಪಿ ಸಿಎಂ ಅಭ್ಯರ್ಥಿ ಕುತೂಹಲಕ್ಕೆ ಸಚಿವ ಅಮಿತ್‌ ಶಾ ತೆರೆ

ಪ. ಬಂಗಾಲದ ಬೋಲ್ಪುರ ಹೈವೋಲ್ಟೆಜ್‌ ರ್ಯಾಲಿಯಲ್ಲಿ ಗೃಹ ಸಚಿವ ಅಮಿತ್‌ ಶಾ.

ಬೋಲ್ಪುರ: ಪ. ಬಂಗಾಲದ 2021ರ ಚುನಾವಣೆ ಯಲ್ಲಿ 200 ಸೀಟುಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯ ರಹಸ್ಯ ಬಹಿರಂಗಪಡಿಸಿದೆ. “ಬಂಗಾಲದ ಮುಂದಿನ ಸಿಎಂ ಹೊರಗಿನವರಲ್ಲ, ಒಳಗಿನವರೇ’ ಎನ್ನುವ ಮೂಲಕ ಗೃಹ ಸಚಿವ ಅಮಿತ್‌ ಶಾ, ಟಿಎಂಸಿಯ ಮಮತಾ ಬ್ಯಾನರ್ಜಿ ಅವರಿಗೆ ನೇರ ಸವಾಲು ಎಸೆದಿದ್ದಾರೆ. ಬಂಗಾಲದಲ್ಲಿ ಬಿಜೆಪಿ ಎಂದರೆ “ಹೊರಗಿನವರು’ ಎಂದು ವ್ಯಾಖ್ಯಾನಿಸಿದ್ದ ದೀದಿಗೆ ಬೋಲ್ಪುರದ ರೋಡ್‌ ಶೋ ಸ್ಪಷ್ಟ ಉತ್ತರ ನೀಡಿದೆ.

“ಒಳಗಿನವರೇ ಸಿಎಂ’!: “ಒಂದೆಡೆಯಿಂದ ಮತ್ತೂಂದು ರಾಜ್ಯಕ್ಕೆ ಭೇಟಿ ನೀಡಲು ಸಾಧ್ಯವಾಗದಂಥ ದೇಶ ದೀದಿ ಅವರಿಗೆ ಬೇಕಿತ್ತಾ? ಇಂದಿರಾ ಗಾಂಧಿ, ಪ್ರಣವ್‌ ಮುಖರ್ಜಿ, ನರಸಿಂಹ ರಾವ್‌ ಪ. ಬಂಗಾಲಕ್ಕೆ ಬಂದಾಗ ಅವರನ್ನೂ ಹೊರಗಿನವರು ಅಂತ ಮಮತಾ ಕರೆದಿ ದ್ದರಾ? ಆದರೆ, ಆ ಬಗ್ಗೆ ಚಿಂತೆ ಬೇಡ… ದಿಲ್ಲಿಯಿಂದ ಯಾರೂ ಬಂದು ನಿಮ್ಮನ್ನು ಸೋಲಿ ಸುವುದಿಲ್ಲ. ಬಂಗಾಲ ದೊಳಗೇ ಒಬ್ಬರು ನಿಮಗೆ ಸವಾಲು ಹಾಕುತ್ತಾರೆ. ಅವರೇ ಮುಂದಿನ ಸಿಎಂ ಆಗುತ್ತಾರೆ’ ಎಂದು ಶಾ ಪ್ರತಿಜ್ಞೆಗೈದರು.

ರೈತರಿಗೇಕೆ ಹಣ ಕೊಟ್ಟಿಲ್ಲ?: “ಪ. ಬಂಗಾಲ ಸರಕಾರ ರೈತರಿಗೆ 6 ಸಾವಿರ ರೂ. ಹಣವನ್ನೇ ನೀಡಿಲ್ಲ. ರೈತರ ಹಣ ಬಿಡುಗಡೆ ಮಾಡದಿದ್ದರೂ ಈಗ ರೈತರ ಹೋರಾಟಕ್ಕೆ ಮಮತಾ ಬೆಂಬಲ ಸೂಚಿಸುತ್ತಿದ್ದಾರೆ. ಮೊದಲು ಕೇಂದ್ರದ ಹಣವನ್ನು ರೈತರ ಕೈಗಿಡಿ. ನೀವು ಅದನ್ನು ಕೊಡುವುದು ಕೇವಲ ನಿಮ್ಮ ಸೋದರಳಿಯನ ಬರ್ತ್‌ಡೇಗಷ್ಟೇ. ಪಿಎಂ- ಕಿಸಾನ್‌ ಸಮ್ಮಾನ್‌ ನಿಧಿಗೆ ಬಂಗಾಲದ 23 ಲಕ್ಷ ರೈತರು ಮನವಿ ಸಲ್ಲಿಸಿದ್ದಾರೆ. ದೀದಿ ಇದುವರೆಗೂ ರೈತರ ಪಟ್ಟಿಯನ್ನೇ ಕೇಂದ್ರಕ್ಕೆ ರವಾನಿಸಿಲ್ಲ’ ಎಂದು ಗುಡುಗಿದರು.

ಬಾಂಗ್ಲಾ ವಲಸಿಗರ ಪ್ರಸ್ತಾವ‌: ಬಿಜೆಪಿ ಈ ರ್ಯಾಲಿ ಮೂಲಕ ಬಾಂಗ್ಲಾ ಅಕ್ರಮ ವಲಸಿಗರ ಸಮಸ್ಯೆಯನ್ನೂ ಮುನ್ನೆಲೆಗೆ ತಂದಿದೆ. “ರಾಜಕೀಯ ಹಿಂಸಾಚಾರ, ಭ್ರಷ್ಟಾಚಾರ, ಸುಲಿಗೆ, ಬಾಂಗ್ಲಾ ವಲಸಿಗರ ಸಮಸ್ಯೆಗಳಿಂದ ಮುಕ್ತಿ ಹೊಂದಲು ಬಂಗಾಲಿಗರು ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ’ ಎಂದು ಶಾ ವಿಶ್ಲೇಷಿಸಿದರು. “ಫೆಡರಲ್‌ ಮಾದರಿ ವಿರುದ್ಧ ಬಂಗಾಲದಲ್ಲಿ ನಾವು ಬೇರೇನನ್ನೂ ಮಾಡಿಲ್ಲ. ನಮ್ಮ ರೋಡ್‌ ಶೋಗಳಿಗೆ ಜನ ಸೇರೋದನ್ನು ನೋಡಿದರೆ, ಸರಕಾರದ ವಿರುದ್ಧ ಇವರಿಗೆಷ್ಟು ಆಕ್ರೋಶವಿದೆ ಎನ್ನುವುದು ಬಿಂಬಿತವಾಗುತ್ತದೆ. ಹಾಗೆಯೇ ಮೋದಿ ಅವರ ಆಡಳಿತದ ಮೇಲಿನ ನಂಬಿಕೆಯನ್ನೂ ಇದು ತೋರಿಸುತ್ತಿದೆ’ ಎಂದು ಹೇಳಿದರು. ಪ. ಬಂಗಾಲದ 2ನೇ ದಿನದ ಪ್ರವಾಸದಲ್ಲಿ ಶಾ, ರವೀಂದ್ರನಾಥ ಟ್ಯಾಗೋರ್‌ರ ಶಾಂತಿನಿಕೇತನಕ್ಕೆ ಭೇಟಿ ನೀಡಿ ವಿಶ್ವಕವಿಗೆ ಗೌರವ ನಮನ ಸಲ್ಲಿಸಿದರು.
ಜಾನಪದ ಗಾಯಕನ ಮನೆಯಲ್ಲಿ

ಭೋಜನ: ಶಾಂತಿನಿಕೇತನದ ಸಮೀಪದ ರತನಪಳ್ಳಿಯ ಬಂಗಾಲಿ “ಬಾಲ್‌’ ಜಾನಪದ ಗಾಯಕ ಬಸುದೇಬ್‌ ದಾಸ್‌ ಬಾಲ್‌ ಅವರ ಮನೆಯಲ್ಲಿ ಗೃಹ ಸಚಿವ ಭೋಜನ ಸವಿದರು. ಶಾ ಅವರಿಗಾಗಿಯೇ ರಸಗುಲ್ಲ ಸಿದ್ಧಪಡಿಸಲಾಗಿತ್ತು. ಈ ವೇಳೆ ಬಸುದೇಬ್‌ ಮತ್ತು ಅವರ ಕುಟುಂಬ ನಡೆಸಿಕೊಟ್ಟ ಸಂಗೀತಗೋಷ್ಠಿಗೆ ಸಚಿವರು ತಲೆದೂಗಿದರು.

ಸುವೇಂದು ವಿರುದ್ಧ ಕಿಡಿ
ಸಾಲುಸಾಲಾಗಿ ಪಕ್ಷ ತೊರೆಯುತ್ತಿರುವವನ್ನು ಟಿಎಂಸಿ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. “ಪಕ್ಷದೊಳಗಿನ ಆಂತರಿಕ ಸಮಸ್ಯೆಗಳು ಟಿಎಂಸಿಯ ಚುನಾವಣ ಫ‌ಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಬಂಗಾಲದ ಸಚಿವ ಸುಭ್ರತಾ ಮುಖರ್ಜಿ ಹೇಳಿದ್ದಾರೆ. “ದೇಶದ್ರೋಹಿಗಳು, ಬೆನ್ನಿಗೆ ಚೂರಿ ಹಾಕುವವರು ಎಲ್ಲ ಕಾಲದಲ್ಲೂ ಇದ್ದೇ ಇರುತ್ತಾರೆ’ ಎಂದು ಪರೋಕ್ಷವಾಗಿ ಸುವೇಂದು ಅಧಿಕಾರಿಗೆ ಟಾಂಗ್‌ ಕೊಟ್ಟಿದ್ದಾರೆ.

ಒಳಗಿನವರೆಂದರೆ ಯಾರು?
ಬಿಜೆಪಿಗೆ ಬಂಗಾಲದಲ್ಲಿ ವರ್ಚಸ್ಸುಳ್ಳ ನಾಯಕರ ಕೊರತೆ ಇದ್ದೇ ಇದೆ. ಟಿಎಂಸಿಯಿಂದ ಸಿಡಿದು ಕಮಲದ ತೆಕ್ಕೆಗೆ ಬಂದಿರುವ ಸುವೇಂದು ಅಧಿಕಾರಿಯನ್ನೇ ದೃಷ್ಟಿಯಲ್ಲಿ ಟ್ಟುಕೊಂಡು ಶಾ “ಒಳಗಿನವರೇ ಸಿಎಂ ಅಭ್ಯರ್ಥಿ’ ಎಂದು ಹೇಳಿದರಾ?- ಎಂಬ ಪ್ರಶ್ನೆ ಈಗ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಹುಟ್ಟುಹಾಕಿದೆ. ಮಿಡ್ನಾಪುರ ರ್ಯಾಲಿ ವೇಳೆ ಸುವೇಂದುರನ್ನು ಶಾ ಪಕ್ಷಕ್ಕೆ ಬರಮಾಡಿಕೊಳ್ಳುವಾಗ, “ಭೂಮಿಪುತ್ರ ಮಮತಾಗೆ ಚಾಲೆಂಜ್‌ ಹಾಕ್ತಾರೆ’ ಎಂದಿದ್ದರು.

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.