ರಾಜಕೀಯ ಪಕ್ಷಗಳ ಆದಾಯ ಹೆಚ್ಚಳ
Team Udayavani, Jan 11, 2020, 7:50 AM IST
ಹೊಸದಿಲ್ಲಿ: ದೇಶದ ಅಭಿವೃದ್ಧಿ ದರ ಸಹಿತ ವಿವಿಧ ವಲಯಗಳ ವ್ಯಾಪಾರ ವಹಿವಾಟು ಕುಸಿಯುತ್ತಿದ್ದರೆ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಆದಾಯ ಗಣನೀಯವಾಗಿ ಏರಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಬಿಜೆಪಿಗೆ ಬರೋಬ್ಬರಿ 1,383 ಕೋಟಿ ರೂ. ಹರಿದು ಬಂದಿದೆ. ಈ ಮೂಲಕ ವರ್ಷದೊಳಗೆ ದುಪ್ಪಟ್ಟು ಆದಾಯ ಸಂಗ್ರಹಿಸಿದೆ. ಇನ್ನು ಕಾಂಗ್ರೆಸ್ ನಾಲ್ಕು ಪಟ್ಟು ಹೆಚ್ಚು ಆದಾಯ ಪಡೆದಿದೆ.
ಚುನಾವಣ ಆಯೋಗಕ್ಕೆ 2017-18 ರಲ್ಲಿ 1,027 ಕೋಟಿ ರೂ. ಆದಾಯ ತೋರಿಸಿದ್ದ ಬಿಜೆಪಿ, 2018-19ರಲ್ಲಿ 2,410 ಕೋಟಿ ರೂ. ಇದೆ ಎಂದು ಘೋಷಿಸಿಕೊಂಡಿದೆ. ಒಂದು ವರ್ಷದ ಅವಧಿಯಲ್ಲಿ ಶೇ.134ರಷ್ಟು ಅಂದರೆ 1,383 ಕೋಟಿ ರೂ. ಆದಾಯ ವೃದ್ಧಿಸಿಕೊಂಡಿದೆ. ಈ ಪೈಕಿ ಚುನಾವಣ ಬಾಂಡ್ ಮೂಲಕ 1,450 ಕೋಟಿ ರೂ. ಸಂಗ್ರಹಿಸಿದೆ. 2017-18ರಲ್ಲಿ ಚುನಾವಣ ಬಾಂಡ್ನಿಂದ 210 ಕೋಟಿ ರೂ. ಹರಿದು ಬಂದಿತ್ತು. 2018-19ರಲ್ಲಿ ಬಿಜೆಪಿ 1,005 ಕೋಟಿ ರೂ. ಹಾಗೂ 2017-18ರಲ್ಲಿ 758 ಕೋಟಿ ರೂ. ವ್ಯಯಿಸಿದೆ.
ಕಾಂಗ್ರೆಸ್ಗೆ 2018-19ರಲ್ಲಿ 918 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷ ಒಟ್ಟಾರೆ 199 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. 470 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಚುನಾವಣ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಚುನಾವಣ ಬಾಂಡ್ ಮೂಲಕ 383 ಕೋಟಿ ರೂ. ಸಂಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
MUST WATCH
ಹೊಸ ಸೇರ್ಪಡೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ