ಬಿಜೆಪಿ ನಾಯಕಿ ಸೊನಾಲಿ ಫೋಗಟ್ ಸಾವು: ಸಿಬಿಐ ತನಿಖೆಗೆ ಕುಟುಂಬಸ್ಥರ ಒತ್ತಾಯ
ಆಪ್ತ ಸಹಾಯಕನಿಂದಲೇ ಅತ್ಯಾಚಾರ; ಬಿಜೆಪಿ ನಾಯಕಿಯ ತಮ್ಮನ ಆರೋಪ
Team Udayavani, Aug 24, 2022, 10:45 PM IST
ನವದೆಹಲಿ: ಬಿಜೆಪಿ ನಾಯಕಿ ಸೊನಾಲಿ ಫೋಗಟ್ ಅವರದ್ದು ಹೃದಯಾಘಾತವಲ್ಲ ಬದಲಾಗಿ ಕೊಲೆ ಎಂದು ಅವರ ತಮ್ಮ ರಿಂಕು ಢಾಕಾ ದೂರಿದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಸುಧೀರ್ ಸಂಗ್ವಾನ್ ಎಂಬಾತ ತಮ್ಮ ಸಹೋದರಿಗೆ ಆಪ್ತ ಸಹಾಯಕನಾಗಿದ್ದ. ಮೂರು ವರ್ಷಗಳ ಹಿಂದೆ ಆತ ಸೊನಾಲಿಗೆ ಊಟದಲ್ಲಿ ಮತ್ತು ಬರುವ ಔಷಧ ಹಾಕಿ ಅತ್ಯಾಚಾರ ಮಾಡಿದ್ದ. ಅದರ ವಿಡಿಯೋ ಇಟ್ಟುಕೊಂಡು ಮೂರು ವರ್ಷಗಳಿಂದ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ.
ಆ.22ರಂದು ಸೊನಾಲಿ ಮೈದುನ ಅಮನ್ಗೆ ಕರೆ ಮಾಡಿ, “ಸುಧೀರ್ ಊಟದಲ್ಲಿ ಏನೋ ಬೆರೆಸಿ ಕೊಟ್ಟಿದ್ದಾನೆ. ಅದರಿಂದಾಗಿ ನನಗೆ ಆರೋಗ್ಯ ಹದಗೆಟ್ಟಿದೆ’ ಎಂದೂ ಹೇಳಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಂಗಳವಾರ ಸೋನಾಲಿ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!