ಮಹಾರಾಷ್ಟ್ರ; ಸೋದರ ಸಂಬಂಧಿ ಎದುರು ಬಿಜೆಪಿಯ ಪಂಕಜಾ ಮುಂಡೆಗೆ ಸೋಲು
Team Udayavani, Oct 24, 2019, 3:55 PM IST
ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ದೇವೇಂದ್ರ ಫಡ್ನವೀಸ್ ಸರಕಾರದಲ್ಲಿ ಸಚಿವೆಯಾಗಿದ್ದ ಪಂಕಜಾ ಮುಂಡೆ ಪಾರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸಂಬಂಧಿ ಎನ್ ಸಿಪಿಯ ಧನಂಜಯ್ ಮುಂಡೆ ಎದುರು ಪರಾಜಯಗೊಂಡಿದ್ದಾರೆ.
ಪಂಕಜಾ ಮುಂಡೆ ತಮ್ಮ ಪ್ರತಿಸ್ಪರ್ಧಿ ಸಹೋದರ ಸಂಬಂಧಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಧನಂಜಯ್ ಮುಂಡೆ ಎದುರು 22 ಸಾವಿರ ಮತಗಳ ಅಂತರದಲ್ಲಿ ಸೋಲನ್ನನುಭವಿಸಿದ್ದಾರೆ.
ಗೋಪಿನಾಥ್ ಮುಂಡೆ ಪುತ್ರಿಯಾಗಿರುವ ಪಂಕಜಾ ಮುಂಡೆ ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಭಾವಿ ರಾಜಕಾರಣಿ ಹಾಗೂ ಫಯರ್ ಬ್ರ್ಯಾಂಡ್ ಆಗಿ ಹೆಸರು ಗಳಿಸಿದ್ದರು. 2017ರಲ್ಲಿ ಪವರ್ ಫುಲ್ ರಾಜಕಾರಣಿ ಎಂಬ ಪ್ರಶಸ್ತಿಯನ್ನೂ ಪಡೆದಿದ್ದರು.
ಧನಂಜಯ್ ಪಂಡಿತ್ ರಾವ್ ಮುಂಡೆ ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದಾರೆ. ಧನಂಜಯ್ ಗೋಫಿನಾಥ್ ಮುಂಡೆ ಅವರ ಸಹೋದರ ಸಂಬಂಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು