ಬಿಜೆಪಿ ಸಂಸದ ಮಹಂತ ಚಂದ್ರನಾಥ್‌ ವಿಧಿವಶ 

Team Udayavani, Sep 17, 2017, 9:58 AM IST

ಅಲ್ವಾರ್‌ : ರಾಜಸ್ಥಾನದ ಬಿಜೆಪಿ ಸಂಸದ ಮಹಂತ್‌ ಚಂದ್ರನಾಥ್‌ (61)ಅವರು ಶನಿವಾರ ತಡರಾತ್ರಿ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಎಎನ್‌ಐ ವರದಿಯಂತೆ ಇಂದು ಭಾನುವಾರ ಸಂಜೆ ಹರಿಯಾಣಾದ ರೋಹಟಕ್‌ ನಲ್ಲಿ ಅಂತಿಮ ವಿಧಿವಿದಾನಗಳು ನಡೆಯಲಿವೆ.

ನಾಥ ಪರಂಪರೆಯ ಸನ್ಯಾಸಿಯಾಗಿದ್ದ ಚಂದ್ರನಾಥ್‌ ಮಸ್ತ್ ನಾಥ್‌ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. 

2014 ರಲ್ಲಿ ಉಪಚುನಾವಣೆಯಲ್ಲಿ ಬೆಹರೂರ್‌ ಕ್ಷೇತ್ರದಲ್ಲಿ ಜಯಗಳಿಸಿದ್ದ ಅವರು ಸಾರ್ವತ್ರಿಕ ಚುನಾವಣೆಯಲ್ಲಿ  ಅಲ್ವಾರ್‌ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದು ಕಾಂಗ್ರೆಸ್‌ ಅಭ್ಯರ್ಥಿ ಜಿತೇಂದ್ರ ಸಿಂಗ್‌ ಅವರನ್ನು ಮಣಿಸಿದ್ದರು. 

2017 ಫೆಬ್ರವರಿ ತಿಂಗಳಿನಲ್ಲಿ ಹರಿಯಾಣ ಕೋರ್ಟ್‌ ಭೂಹಗರಣವೊಂದಕ್ಕೆ ಸಂಬಂಧಿಸಿ ಕ್ರಿಮಿನಲ್‌ ಪಿತೂರಿ ಸಾಬೀತಾದ ಹಿನ್ನಲೆಯಲ್ಲಿ  ಚಂದ್ರನಾಥ್‌ಗೆ 1 ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ