ವಾರಾಣಸಿಯನ್ನೇ ನೆಚ್ಚಿಕೊಂಡ ಮೋದಿ,ಅಡ್ವಾಣಿ ಕ್ಷೇತ್ರದಿಂದ ಶಾ ಸ್ಪರ್ಧೆ

Team Udayavani, Mar 21, 2019, 3:57 PM IST

ಹೊಸದಿಲ್ಲಿ: ಲೋಕಸಭಾ ಚುನಾವಣೆಗಾಗಿ ಬಿಜೆಪಿ ಗುರುವಾರ 184 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧೆ ಮಾಡಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರು ಪ್ರತಿನಿಧಿಸುತ್ತಿರುವ ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಬಿಜೆಪಿ ಚುನಾವಣಾ ಸಮಿತಿ,  ಕೇಂದ್ರ ಸಚಿವ  ಜೆ.ಪಿ.ನಡ್ಡಾ ಅವರು ಗುರುವಾರ ರಾತ್ರಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದರು. 

ಪ್ರಮುಖರ ಕ್ಷೇತ್ರಗಳು 
ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ -ಲಕ್ನೋ, ನಿತಿನ್‌ ಗಡ್ಕರಿ-ನಾಗಪುರ, ವಿ.ಕೆ.ಸಿಂಗ್‌-ಗಾಜಿಯಾಬಾದ್‌, ಹೇಮಾ ಮಾಲಿನಿ -ಮಥುರಾ, ಸಾಕ್ಷಿ ಮಹಾರಾಜ್‌-ಉನ್ನಾವ್‌, ಸ್‌ಮೃತಿ ಇರಾನಿ- ಅಮೇಠಿಯಿಂದ ಸ್ಪರ್ಧಿಸಲಿದ್ದಾರೆ. 

ಪಶ್ಚಿಮ ಬಂಗಾಳದ ಅನ್ಸೋಲ್‌ನಿಂದ ಬಬುಲ್‌ ಸುಪ್ರಿಯೋ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ.

ಮುಂಬಯಿ ಉತ್ತರ -ಪೂನಮ್‌ ಮಹಾಜನ್‌, ಕುಮ್ಮನಮ್‌ ರಾಜಶೇಖರನ್‌-ತಿರುವನಂತಪುರದಿಂದ ಕಣಕ್ಕಿಳಿಯಲಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ