Udayavni Special

ಬಿಜೆಪಿ-ಶಿವಸೇನೆ ಮೈತ್ರಿಕೂಟ:16 ಸ್ಥಾನಗಳಲ್ಲಿ ಅತ್ಯಧಿಕ ಅಂತರದ ಜಯ

Team Udayavani, May 28, 2019, 1:04 PM IST

1-b

ಮುಂಬಯಿ: ಮಹಾರಾಷ್ಟ್ರದ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿವಸೇನೆಯ ಮೈತ್ರಿಕೂಟವು ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರೊಂದಿಗೆ ತಮ್ಮ ಎದುರಾಳಿಗಳನ್ನು ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ ಸಾಧನೆಯನ್ನು ಮಾಡಿವೆ.

ಈ ವರ್ಷ ನಡೆದ ಚುನಾವಣೆಯಲ್ಲಿ 48 ಲೋಕಸಭಾ ಕ್ಷೇತ್ರಗಳಲ್ಲಿ 41 ಸ್ಥಾನಗಳನ್ನು ಜಯಿಸಿದ ಬಿಜೆಪಿ-ಶಿವಸೇನಾ ಮೈತ್ರಿಕೂಟವು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಚುನಾವಣ ಆಯೋಗ ಬಿಡುಗಡೆ ಮಾಡಿದ ದತ್ತಾಂಶದ ವರದಿಯಲ್ಲಿ 16 ಸ್ಥಾನಗಳಲ್ಲಿ ಕೇಸರಿ ಮಿತ್ರಪಕ್ಷಗಳು ಎರಡು ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿವೆ. ಪುಣೆ, ಮಾವಲ…, ನಾಶಿಕ್‌ ಮತ್ತು ನಾಗಪುರ, ಮುಂಬಯಿಯ ಐದು ಸ್ಥಾನಗಳು ಸೇರಿದಂತೆ ಇನ್ನಿತರ 9 ಸ್ಥಾನಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ತಿಳಿಸಲಾಗಿದೆ.

ಮುಂಬಯಿ ಉತ್ತರ, ಮುಂಬಯಿ ನಾರ್ತ್‌ ಈಸ್ಟ್‌, ಮುಂಬಯಿ ನಾರ್ತ್‌ ವೆಸ್ಟ್‌, ಥಾಣೆ ಮತ್ತು ಕಲ್ಯಾಣ್‌ನಲ್ಲಿ ಕೇಸರಿ ಮಿತ್ರಪಕ್ಷಗಳು ದೊಡ್ಡ ಮಟ್ಟದ ಅಂತರದಿಂದ ಗೆಲುವು ಸಾಧಿಸಿವೆ. ಬಿಜೆಪಿ-ಶಿವಸೇನಾ ಅಭ್ಯರ್ಥಿಗಳಾದ ಅಕೋಲಾ, ಧುಲೆ, ಜಾಲಾ°, ಲಾತೂರ್‌, ರಾವಲ್‌, ಜಲ್ಗಾಂವ್‌ ಮತ್ತು ಅಹ್ಮದ್‌ನಗರಗಳಲ್ಲಿ 7 ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಪಡೆದಿರುವುದು ಮತ್ತೂಂದು ವಿಶೇಷತೆಯಾಗಿದೆ.

ವಿಪಕ್ಷಗಳಿಗೆ ಸವಾಲು
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಎನ್‌ಸಿಪಿ ವಿಪಕ್ಷಗಳು ಕೇವಲ 5 ಸ್ಥಾನಗಳನ್ನು ಗೆದ್ದಿರುವುದರಿಂದ ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಈ ಜಯವು ವಿಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಲಿದೆ. ಕಾಂಗ್ರೆಸ್‌ 1 ಸೀಟಿನಲ್ಲಿ ಗೆಲುವು ಸಾಧಿಸಿದರೆ, ಎನ್‌ಸಿಪಿ 4 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಎನ್‌ಸಿಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕೂಡ ಅಮರಾವತಿಯಲ್ಲಿ ಜಯಗಳಿಸಿದ್ದಾರೆ. ವಿಪಕ್ಷದ ಸಮಸ್ಯೆಗಳಿಗೆ ಸೇರಿಸಲು, ಮುಂಬಯಿ ನಾರ್ತ್‌ ಈಸ್ಟ್‌ ಮತ್ತು ನಾಗಪುರದ ಎರಡು ಸ್ಥಾನಗಳನ್ನು ಹೊರತುಪಡಿಸಿ. ವಿಪಕ್ಷ ಅಭ್ಯರ್ಥಿಗಳ ಸೋಲಿನ ಅಂತರ ಕೂಡ ಹೆಚ್ಚಿರುವುದು ಸುಳ್ಳಲ್ಲ.

ಮಹಾರಾಷ್ಟ್ರ ಕಾಂಗ್ರೆಸ್‌ ಮುಖ್ಯಸ್ಥ ಅಶೋಕ್‌ ಚವಾಣ್‌ ಅವರು, ತಮ್ಮ ಕಳಪೆ ಪ್ರದರ್ಶನಕ್ಕೆ ಪ್ರಕಾಶ್‌ ಅಂಬೇಡ್ಕರ್‌ ನೇತೃತ್ವದ ವಂಚಿತ್‌ ಬಹುಜನ ಅಘಾಡಿ (ವಿಬಿಎ) ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ-ಸೇನಾ ಅಭ್ಯರ್ಥಿಗಳ ಗೆಲುವಿನ ಅಂತರವನ್ನು ಗಮನಿಸುತ್ತಿರುವಾಗ, ಲೋಕಸಭಾ ಚುನಾವಣೆಯಲ್ಲಿ ವಿಬಿಎ ಅಭ್ಯರ್ಥಿಗಳು ಪಡೆದುಕೊಂಡ ಮತಗಳ ಸಂಖ್ಯೆಯನ್ನು ನೋಡಬೇಕು. ಎಲ್ಲಾ 288 ವಿಧಾನಸಭಾ ಸ್ಥಾನಗಳಲ್ಲೂ ಸ್ಪರ್ಧಿಸಿರುವ ಪ್ರಕಾಶ್‌ ಅಂಬೇಡ್ಕರ್‌ ಅವರು ವಿರೋಧ ಮತಗಳನ್ನು ವಿಂಗಡಿಸಲು ಬಯಸಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಚವಾಣ್‌ ಅವರು ಆಪಾದಿಸಿದ್ದಾರೆ.

ಮೋದಿ ಅಲೆ ಪ್ರಭಾವ
ನಗರ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಹೆಚ್ಚಿನ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಮಹತ್ವಾಕಾಂಕ್ಷೆಯ ವರ್ಗವು ಅವರಿಗೆ ಯಾವುದೇ ನಂಬಲರ್ಹವಾದ ಪರ್ಯಾಯವನ್ನು ಕಾಣದ ಕಾರಣ ಮೋದಿಯವರನ್ನು ಸಂಪೂರ್ಣವಾಗಿ ಬೆಂಬಲಿಸಿತು. ಇದಕ್ಕೆ ವ್ಯತಿರಿಕ್ತವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬರ ಮತ್ತು ಇತರ ಅನೇಕ ಸಮಸ್ಯೆಗಳನ್ನು ಪರಿಗಣಿಸಿ ಸರಕಾರಕ್ಕೆ ಅಸ್ಥಿರತೆಯಿತ್ತು. ಆದರೆ ಇಲ್ಲಿ ವಿಪಕ್ಷಗಳು ವೈಫಲ್ಯವನ್ನು ಕಂಡಿವೆ. ಸಮೀಕ್ಷೆಯ ಫಲಿತಾಂಶಗಳು ಅದೇ ರೀತಿ ಸೂಚಿಸುತ್ತವೆ ಎಂದು ರಾಜಕೀಯ ವಿಶ್ಲೇಷಕ ಅಭಯ್‌ ದೇಶಪಾಂಡೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

01

ಆನ್ ಲೈನ್ ನಲ್ಲಿ ಮದ್ಯ ಖರೀದಿಸಲು ಹೋಗಿ ಮೋಸ ಹೋದ ಬಾಲಿವುಡ್ ನಟಿ

bantwala-1

ಬಂಟ್ವಾಳ: ಶ್ರೀಗಂಧ ಮರ ಕಡಿದು ಮಾರಾಟ ಹಾಗೂ ‘ಉಡ’ ಭಕ್ಷಣೆಗೆ ಯತ್ನ: ಆರೋಪಿಗಳ ಬಂಧನ

ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಹಲವಾರು ಹಿನ್ನೆಲೆಗಳಿವೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಹಲವಾರು ಹಿನ್ನೆಲೆಗಳಿವೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಅರುಣಾಚಲ ಗಡಿ ಸಮೀಪ…ಟಿಬೆಟ್ ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಕೊಟ್ಟ ಚೀನಾ

ಅರುಣಾಚಲ ಗಡಿ ಸಮೀಪ…ಟಿಬೆಟ್ ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ಕೊಟ್ಟ ಚೀನಾ

ಸಹೋದರ-ಅಳಿಯನೊಂದಿಗೆ ರಮೇಶ್ ಜಾರಕಿಹೊಳಿ‌ ಸುತ್ತೂರು ಮಠಕ್ಕೆ ಪ್ರಯಾಣ

ಸಹೋದರ-ಅಳಿಯನೊಂದಿಗೆ ರಮೇಶ್ ಜಾರಕಿಹೊಳಿ‌ ಸುತ್ತೂರು ಮಠಕ್ಕೆ ಪ್ರಯಾಣ

ಸಿದ್ದರಾಮಯ್ಯನವರೇ, ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ, ಒಳ್ಳೆದಾಗಲ್ಲ: ವಿಶ್ವನಾಥ್ ಕಿಡಿ

ಸಿದ್ದರಾಮಯ್ಯನವರೇ, ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ, ಒಳ್ಳೆದಾಗಲ್ಲ: ವಿಶ್ವನಾಥ್ ಕಿಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತುರ್ತು ಪರಿಸ್ಥಿತಿಯ ಕರಾಳ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ತುರ್ತು ಪರಿಸ್ಥಿತಿಯ ಕರಾಳ ದಿನ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಮನೆಗೆ ಇಡಿ ದಾಳಿ

ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಮನೆಗೆ ಇಡಿ ದಾಳಿ

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 51,667 ಕೋವಿಡ್ ಸೋಂಕು ಪತ್ತೆ, 1329 ಮಂದಿ ಸಾವು

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 51,667 ಕೋವಿಡ್ ಸೋಂಕು ಪತ್ತೆ, 1329 ಮಂದಿ ಸಾವು

ಮುಂಗಾರು ಮಳೆಗಾಗಿ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಜುಲೈವರೆಗೆ ಕಾಯಬೇಕು: ಐಎಂಡಿ

ಮುಂಗಾರು ಮಳೆಗಾಗಿ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಜುಲೈವರೆಗೆ ಕಾಯಬೇಕು: ಐಎಂಡಿ

ಹೆದ್ದಾರಿ ಗುಣಮಟ್ಟ: ವೈಫ‌ಲ್ಯಕ್ಕೆ ಇನ್ನು  ಅಧಿಕಾರಿಗಳೂ ಹೊಣೆ

ಹೆದ್ದಾರಿ ಗುಣಮಟ್ಟ: ವೈಫ‌ಲ್ಯಕ್ಕೆ ಇನ್ನು  ಅಧಿಕಾರಿಗಳೂ ಹೊಣೆ

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

01

ಆನ್ ಲೈನ್ ನಲ್ಲಿ ಮದ್ಯ ಖರೀದಿಸಲು ಹೋಗಿ ಮೋಸ ಹೋದ ಬಾಲಿವುಡ್ ನಟಿ

bantwala-1

ಬಂಟ್ವಾಳ: ಶ್ರೀಗಂಧ ಮರ ಕಡಿದು ಮಾರಾಟ ಹಾಗೂ ‘ಉಡ’ ಭಕ್ಷಣೆಗೆ ಯತ್ನ: ಆರೋಪಿಗಳ ಬಂಧನ

ಪಿರಿಯಾಪಟ್ಟಣದ ಅರಸಿನ ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ: ಕೊಲೆ ಶಂಕೆ

ಪಿರಿಯಾಪಟ್ಟಣದ ಅರಸಿನ ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ: ಕೊಲೆ ಶಂಕೆ

ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಹಲವಾರು ಹಿನ್ನೆಲೆಗಳಿವೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಹಲವಾರು ಹಿನ್ನೆಲೆಗಳಿವೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವಕ ಆತ್ಮಹತ್ಯೆ: ಈ ಹಿಂದೆ ಎರಡು ಬಾರಿ ಪ್ರಯತ್ನ ಮಾಡಿದ್ದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.