ಬಿಜೆಪಿಗೆ ಮಗ್ಗಲ ಮುಳ್ಳಾಗಿದ್ದ ಶತ್ರುಗಿಲ್ಲ ಪಾಟ್ನಾ ಸಾಹಿಬ್ ಟಿಕೆಟ್
Team Udayavani, Sep 19, 2018, 2:01 PM IST
ಪಾಟ್ನಾ: ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ಬಿಜೆಪಿ ಸಂಸದ, ಶತುಘ್ನ ಸಿನ್ಹಾ ಅವರಿಗೆ ಬಿಜೆಪಿ ಶಾಕ್ ನೀಡಿದೆ. ಶತ್ರುಘ್ನ ಸಿನ್ಹಾ ಪ್ರತಿನಿಧಿಸುತ್ತಿದ್ದ ಪಾಟ್ನಾ ಸಾಹೀಬ್ ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿಯನ್ನಾಗಿ ಬಿಹಾರ ಡಿಸಿಎಂ ಸುಶೀಲ್ ಮೋದಿ ಅವರ ಹೆಸರನ್ನು ಪ್ರಕಟಿಸಿರುವ ಬಗ್ಗೆ ವರದಿಯಾಗಿದೆ.
ಶತ್ರುಘ್ನ ಸಿನ್ಹಾ ಬಿಜೆಪಿ ನಾಯಕತ್ವದ ವಿರುದ್ಧವೇ ಧ್ವನಿಯೆತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಬಹಿರಂಗವಾಗಿ ಟೀಕೆಗಳನ್ನು ಮಾಡಿದ್ದರು.
ಶತ್ರುಘ್ನ ಸಿನ್ಹಾ ಅವರು ಪಟ್ನಾ ಸಾಹೀಬ್ ಕ್ಷೇತ್ರದಿಂದಲೇ ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.