ಪಶ್ಚಿಮ ಬಂಗಾಲದಲ್ಲಿ ಬಿಜೆಪಿ, ತೃಣಮೂಲ ಕಾರ್ಯಕರ್ತರ ಮೃತದೇಹ ಪತ್ತೆ

Team Udayavani, May 12, 2019, 10:32 AM IST

ಕೊಲ್ಕೊತ್ತಾ: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ನಡೆಯುತ್ತಿರುವ ಒಟ್ಟು 59 ಕ್ಷೇತ್ರಗಳಲ್ಲಿ ಪಶ್ಚಿಮಬಂಗಾಲದ 8 ಕ್ಷೇತ್ರಗಳೂ ಸೇರಿವೆ. ಇವುಗಳಲ್ಲಿ ಝಾರ್ ಗ್ರಾಮ್ ಮತ್ತು ಮೇದಿನೀಪುರ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ದಿನಕ್ಕೂ ಮೊದಲು ಅಂದರೆ ಶನಿವಾರದಂದು ಭಾರತೀಯ ಜನತಾ ಪಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರ ಕೊಲೆಯಾಗಿದೆ.

ಝಾರ್ ಗ್ರಾಮ್ ನ ಗೋಪಿಬಲ್ಲಾಬ್ ಪುರ್ ಎಂಬಲ್ಲಿ ಬಿಜೆಪಿ ಬೂತ್ ಅಧ್ಯಕ್ಷ ರಮಣ್ ಸಿಂಗ್ ಎಂಬಾತನ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಶನಿವಾರ ರಾತ್ರಿ ಪತ್ತೆಯಾಗಿದೆ.

ಅದೇ ರೀತಿಯಲ್ಲಿ ಮೇದಿನೀಪುರದ ಕಾಂತಿ ಎಂಬಲ್ಲಿ ಟಿಎಂಸಿ ಕಾರ್ಯಕರ್ತರೊಬ್ಬರ ಮೃತದೇಹವೂ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಸುಧಾಕರ ಮೈತಿ ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ತಮ್ಮ ಸಂಬಂಧಿಕರೊಬ್ಬರನ್ನು ಕಾಣಲೆಂದು ಆಸ್ಪತ್ರೆಗೆ ಹೋಗಿದ್ದರು ಆದರೆ ಬಳಿಕ ಅವರು ಮನೆಗೆ ಹಿಂತಿರುಗಿಲ್ಲ ಎನ್ನಲಾಗುತ್ತಿದೆ.

ನಂತರ ಅವರ ಮೃತದೇಹ ಪತ್ತೆಯಾಗಿದ್ದು ಇದೀಗ ಸುದಾಕರ ಮನೆಯವರು ಇದೊಂದು ಕೊಲೆ ಎಂದು ಆರೋಪ ಮಾಡಿದ್ದಾರೆ. ಈ ಎರಡು ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.

ಕಳೆದ ಐದು ಹಂತಗಳ ಮತದಾನ ಸಂದರ್ಭದಲ್ಲೂ ಪಶ್ಚಿಮ ಬಂಗಾಲದಲ್ಲಿ ಹಿಂಸಾಚಾರ ತಾಂಡವವಾಡಿತ್ತು. ಇಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯುತ್ತಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ