ಬಿಜೆಪಿ ಸದಸ್ಯತ್ವ ಬಲ 14 ಕೋಟಿ
Team Udayavani, Aug 22, 2019, 5:14 AM IST
ಹೊಸದಿಲ್ಲಿ: ಬರೋಬ್ಬರಿ 11 ಕೋಟಿ ಸದಸ್ಯರು ಇರುವ ವಿಶ್ವದ ಬೃಹತ್ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಜೆಪಿಗೆ ಈಗ ಮತ್ತಷ್ಟು ಸದಸ್ಯರು ಸೇರ್ಪಡೆಯಾಗಿದ್ದು, ಸದಸ್ಯತ್ವ ಅಭಿಯಾನ ಯಶಸ್ವಿಯಾಗಿದೆ.
ಪ್ರಸಕ್ತ ಸಾಲಿನಲ್ಲಿ 2.2 ಕೋಟಿ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಗುರಿ ಹಾಕಿಕೊಂಡಿದ್ದ ಆಡಳಿತಾರೂಢ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದ್ದು, 3.78 ಕೋಟಿ ಮಂದಿ ಹೊಸತಾಗಿ ಸದಸ್ಯರಾಗಿದ್ದಾರೆ. ಇದರಿಂದಾಗಿ, ಪಕ್ಷದ ಒಟ್ಟು ಸದಸ್ಯರ ಸಂಖ್ಯೆ 14 ಕೋಟಿಗೆ ಏರಿದೆ. ಹೊಸತಾಗಿ ಸದಸ್ಯತ್ವ ಪಡೆದುಕೊಂಡವರ ಸಂಖ್ಯೆ 3,78,67,753 ಆಗಿದೆ. ಸದಸ್ಯತ್ವ ಅಭಿಯಾನದ ಸಹ ಸಂಯೋಜಕ ಮತ್ತು ಉಪಾಧ್ಯಕ್ಷ ದುಷ್ಯಂತ್ ಕುಮಾರ್ ಗೌತಮ್ ಬುಧವಾರ ಹೊಸದಿಲ್ಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ 65 ಲಕ್ಷ, ಪಶ್ಚಿಮ ಬಂಗಾಳದಲ್ಲಿ 36 ಲಕ್ಷ, ಗುಜರಾತ್ನಲ್ಲಿ 34 ಲಕ್ಷ, ದಿಲ್ಲಿಯಲ್ಲಿ 15 ಲಕ್ಷ ಹೊಸ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ