ತ್ರಿಪುರಾದಲ್ಲಿ ಬಿಜೆಪಿಗೆ ಜಯ: ಸಮೀಕ್ಷೆ
Team Udayavani, Feb 28, 2018, 12:00 PM IST
ನವದಿಲ್ಲಿ: ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಜಯ ಗಳಿಸಲಿದ್ದು, 45-50 ಸ್ಥಾನ, ಸಿಪಿಎಂ 9-10 ಸ್ಥಾನ ಗಳಿಸಲಿದೆ. ಹೀಗೆಂದು ನ್ಯೂಸ್24 ಸಮೀಕ್ಷೆ ತಿಳಿಸಿದೆ. ನ್ಯೂಸ್ ಎಕ್ಸ್ ಪ್ರಕಾರ, ಬಿಜೆಪಿ ಮೈತ್ರಿಕೂಟಕ್ಕೆ 35-45, ಸಿಪಿಎಂಗೆ 14-23 ಸ್ಥಾನ ಲಭಿಸುವ ಸಾಧ್ಯತೆ ಇದೆ. ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮಿತ್ರ ಪಕ್ಷ ಎನ್‌ಡಿಪಿಪಿ 27-32, ಕಾಂಗ್ರೆಸ್-2, ಎನ್‌ಪಿಎಫ್ 20-25 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ನ್ಯೂಸ್ ಎಕ್ಸ್ ಸಮೀಕ್ಷೆ ತಿಳಿಸಿದೆ. ಮೇಘಾಲಯದಲ್ಲಿ ಬಿಜೆಪಿ 30, ಕಾಂಗ್ರೆಸ್-20ರಲ್ಲಿ ಜಯ ಗಳಿ ಸಲಿದೆ ಎಂದು ನ್ಯೂಸ್ 24 ಹೇಳಿದೆ.
ಶೇ.75ರಷ್ಟು ಮತ: ನಾಗಾಲ್ಯಾಂಡ್, ಮೇಘಾಲಯದಲ್ಲಿ ಮಂಗಳವಾರ ಮತದಾನ ನಡೆದಿದ್ದು, ಕ್ರಮವಾಗಿ ಶೇ.75 ಮತ್ತು ಶೇ.67ರಷ್ಟು ಹಕ್ಕುಚಲಾವಣೆಯಾಗಿದೆ. ನಾಗಾಲ್ಯಾಂಡ್‌ನಲ್ಲಿ ಹಿಂಸೆಗೆ ಇಬ್ಬರು ಬಲಿಯಾಗಿದ್ದಾರೆ.