ಚಂದಮಾಮ ಮಾಲೀಕರ ವಿರುದ್ಧ ಕಪ್ಪುಹಣ ಆರೋಪ

Team Udayavani, Mar 12, 2019, 12:30 AM IST

ಹೊಸದಿಲ್ಲಿ: ದಶಕಗಳ ಕಾಲ ದೇಶದ ಚಿಣ್ಣರನ್ನು ರಂಜಿಸಿದ “ಚಂದಮಾಮ’ ಮಾಸಿಕವನ್ನು 2007ರಲ್ಲಿ ಖರೀದಿಸಿದ ಮುಂಬಯಿನ ಜಿಯೋಡೆಸಿಕ್‌ ಕಂಪೆನಿ ವಿರುದ್ಧ ಸ್ವಿಜರ್ಲೆಂಡ್‌ನ‌ಲ್ಲಿ ಕಪ್ಪುಹಣ ಇರಿಸಿದ ಆರೋಪ ಕೇಳಿಬಂದಿದೆ. ಅದಕ್ಕೆ ಪೂರಕವಾಗಿ ಸ್ವಿಸ್‌ ಅಧಿಕಾರಿಗಳು ಕಂಪೆನಿ ವಿರುದ್ಧ ಇರುವ ಮಾಹಿತಿ ಹಂಚಿಕೊಳ್ಳುವ ವಾಗ್ಧಾನವನ್ನೂ ಮಾಡಿದ್ದಾರೆ. ಸಂಸ್ಥೆಯ ಮೂವರು ನಿರ್ದೇಶಕರು ನಿಯಮಗಳನ್ನು ಉಲ್ಲಂಘಿಸಿ ಹೂಡಿಕೆ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಕೇಂದ್ರದ ತನಿಖಾ ಸಂಸ್ಥೆಗಳು ಅವರ ವಿರುದ್ಧ ತನಿಖೆ ನಡೆಸುತ್ತಿವೆ. 

ಮಾ.5ರಂದು ಸ್ವಿಜರ್ಲೆಂಡ್‌ನ‌ ತೆರಿಗೆ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಜಿಯೋಡೆಸಿಕ್‌ ಕಂಪೆನಿ ವಿರುದ್ಧದ ಮಾಹಿತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ನಿರ್ದೇಶಕರಾಗಿರುವ ಪ್ರಶಾಂತ್‌ ಶರದ್‌ ಮುಲೇಕರ್‌, ಪಂಕಜ್‌ ಕುಮಾರ್‌ ಓಂಕಾರ್‌ ಶ್ರೀವಾಸ್ತವ ಮತ್ತು ಕಿರಣ್‌ ಕುಲಕರ್ಣಿ ವಿರುದ್ಧ ತನಿಖೆಯ ಮಾಹಿತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರದ ವಿರುದ್ಧ 30 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ