ಬಂಗಾಲದಲ್ಲಿ ಸಾವಿನ ಆಟಕ್ಕೆ ಮತ್ತೂಬ್ಬ ಬಾಲಕ ಬಲಿ
Team Udayavani, Aug 14, 2017, 6:10 AM IST
ಕೋಲ್ಕತಾ: ಸಾವಿನ ಆಟ “ಬ್ಲೂ ವೇಲ್ ಸೂಸೈಡ್ ಚಾಲೆಂಜ್’ಗೆ ಭಾರತದಲ್ಲಿ ಮತ್ತೂಂಬ್ಬ ಬಾಲಕ ಬಲಿಯಾಗಿದ್ದಾನೆ. ಈ 50 ದಿನಗಳ ಆಟ ಪೂರೈಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಲದ ಬಾಲಕನೊಬ್ಬ ಕುತ್ತಿಗೆಗೆ ಪ್ಲಾಸ್ಟಿಕ್ ಚೀಲ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಶ್ಚಿಮ ಮೇದಿನಿಪುರ ಜಿಲ್ಲೆ ಆನಂದಪುರದ ಖಾಸಗಿ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿ ಅಂಕನ್ ದೇಯ್ ಮೃತ ಬಾಲಕ. ಈತ “ಬ್ಲೂ ವೇಲ್ ಚಾಲೆಂಜ್’ ಆಟವಾಡುತ್ತಿದ್ದ ಎಂದು ಆತನ ಶಾಲೆ ಸಹಪಾಠಿಗಳು ಹೇಳಿದ್ದಾರೆ. ಶನಿವಾರ ಸ್ನಾನಕ್ಕೆಂದು ಬಾತ್ರೂಂಗೆ ಹೋದವ ಅಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.