ಬಾಂಬ್‌ ಸ್ಫೋಟ: ಯೋಧ ಹುತಾತ್ಮ

Team Udayavani, May 23, 2019, 6:00 AM IST

ಸಾಂದರ್ಭಿಕ ಚಿತ್ರ

ಜಮ್ಮು/ಬಾಗಲಕೋಟೆ: ಕಾಶ್ಮೀರದ ಪೂಂಛ್ ಜಿಲ್ಲೆ ಬಳಿ ಗಡಿಯಲ್ಲಿ ತರಬೇತಿ ಪ್ರಕ್ರಿಯೆ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದ ಪರಿಣಾಮ ಕರ್ನಾಟಕದ ಬಾಗಲಕೋಟೆ ಮೂಲದ ಯೋಧ ಸಾವನ್ನಪ್ಪಿದ್ದಾರೆ.

ತಾಲೂಕಿನ ಇಲಾಳ ಗ್ರಾಮದ ಶ್ರೀಶೈಲ ರಾಯಪ್ಪ ಬಳಬಟ್ಟಿ (34) 12ನೇ ಮದ್ರಾಸ್‌ ಇನ್‌ಫೆಂಟ್ರಿ ರೆಜಿ ಮೆಂಟ್‌ಗೆ 12 ವರ್ಷಗಳ ಹಿಂದೆ ಸೇರಿ ದ್ದರು. ರಜೌರಿಯಲ್ಲಿ ಬುಧವಾರ ಬೆಳಗ್ಗೆ ಆರ್‌ಡಿಎಕ್ಸ್‌ ಬಾಂಬ್‌ ಸ್ಫೋಟದಿಂದ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ಹುತಾತ್ಮ ಯೋಧನಿಗೆ ಪತ್ನಿ, ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ. ಮೇಂಧರ್‌ ಸೆಕ್ಟರ್‌ನಲ್ಲಿ ತರಬೇತಿ ನಡೆಯುತ್ತಿತ್ತು. ಘಟನೆಯಲ್ಲಿ 7 ಯೋಧರಿಗೆ ಸಣ್ಣಪುಟ್ಟ ಗಾಯ ಗಳಾಗಿವೆ ಎಂದು ಸೇನೆ ಹೇಳಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ