ವಾಟ್ಸ್ಆ್ಯಪ್ ನೋಟಿಸ್ಗೆ ಮಾನ್ಯತೆ
Team Udayavani, Jun 17, 2018, 6:00 AM IST
ಮುಂಬೈ: ಇನ್ನು ಮುಂದೆ ನಿಮ್ಮ ವಾಟ್ಸ್ ಆ್ಯಪ್ ನಂಬರ್ಗೆ ಲೀಗಲ್ ನೋಟಿಸ್ ಬಂದರೆ ಅದು ಅಧಿಕೃತವೇ. ರಿಜಿಸ್ಟರ್ಡ್ ಪೋಸ್ಟ್ನಲ್ಲಿ ಅದು ತಲುಪಲಿಲ್ಲ ಎಂದು ನೆಪಕ್ಕೆ ಅವಕಾಶವೇ ಇಲ್ಲ. ಮುಂಬೈ ನಿವಾಸಿಯೊಬ್ಬರ ವಿರುದ್ಧ ಎಸ್ಬಿಐ ಹೂಡಿದ್ದ ಪ್ರಕರಣದಲ್ಲಿ ಹೈಕೋರ್ಟ್ ಈ ತೀರ್ಪು ನೀಡಿದೆ. ವಾಟ್ಸ್ ಆ್ಯಪ್ನಲ್ಲಿ ನೋಟಿಸ್ ನೀಡಿ, ಅದನ್ನು ಓಪನ್ ಮಾಡಿದಾಗ ಹಸಿರು ಬಣ್ಣದ ಟಿಕ್ ಮಾರ್ಕ್ ಕಂಡುಬಂದರೆ ವ್ಯಕ್ತಿ ಅದನ್ನು ಓದಿದ್ದಾನೆ ಎನ್ನುವುದು ಸ್ಪಷ್ಟ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ರೋಹಿತ್ ಜಾಧವ್ ಎಂಬುವರು ಕ್ರೆಡಿಟ್ ಕಾರ್ಡ್ನಲ್ಲಿ 1.17 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದಕ್ಕೆ ಎಸ್ಬಿಐ ಅವರ ವಿರುದ್ಧ ಕೇಸು ದಾಖಲಿಸಿತ್ತು. ಆದರೆ ಅವರಿಗೆ ಯಾವುದೇ ರೀತಿಯಲ್ಲಿ ನೋಟಿಸ್ ನೀಡಿದರೂ ಅದನ್ನು ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಎಸ್ಬಿಐ ರೋಹಿತ್ ಜಾಧವ್ರ ವಾಟ್ಸ್ಆ್ಯಪ್ ಸಂಖ್ಯೆಗೆ ಲೀಗಲ್ ನೋಟಿಸ್ ಕಳುಹಿಸಿ, ಅದನ್ನು ದಾಖಲೆಯಾಗಿ ಇರಿಸಿಕೊಂಡಿತು. ಮಧ್ಯಸ್ಥಿಕೆದಾರರ ಮೂಲಕ ಪ್ರಕರಣ ಇತ್ಯರ್ಥವಾಗಿ ರೋಹಿತ್ 1.17 ಲಕ್ಷ ರೂ. ಪಾವತಿ ಮಾಡದೇ ಇದ್ದುದರಿಂದ ಎಸ್ಬಿಐ ಬಾಂಬೆ ಹೈಕೋರ್ಟ್ ಮೊರೆ ಹೊಕ್ಕಿತು. ನ್ಯಾ.ಗೌತಮ್ ಎಸ್.ಪಟೇಲ್ ನೇತೃತ್ವದ ನ್ಯಾಯಪೀಠ ” ಜಾಧವ್ಗೆ ಅಧಿಕೃತವಾಗಿಯೇ ವಾಟ್ಸ್ಆ್ಯಪ್ನಲ್ಲಿ ನೋಟಿಸ್ ನೀಡಲಾಗಿದೆ. ಅವರು ಸಂದೇಶ ನೋಡಿರುವುದು ತಾಂತ್ರಿಕವಾಗಿ ಖಚಿತವಾಗಿರುವುದರಿಂದ ಈ ವ್ಯವಸ್ಥೆಗೆ ಮಾನ್ಯತೆ ನೀಡುತ್ತೇನೆ’ ಎಂದಿದೆ.
ನಿಯಮ ಪ್ರಕಾರ ಕಾನೂನು ನೋಟಿಸ್ಗಳನ್ನು ರಿಜಿಸ್ಟರ್ಡ್ ಪೋಸ್ಟ್ನಲ್ಲಿ ಕಳುಹಿಸಬೇಕು. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಯ್ದೆಯಲ್ಲಿ ಇ-ಮೇಲ್, ಇತರ ಯಾವುದೇ ಇಲೆಕ್ಟ್ರಾನಿಕ್ ಮಾಧ್ಯಮ ಮೂಲಕ ಕಳುಹಿಸಲಾಗುವ ಸಂದೇಶವನ್ನು ಸಾಕ್ಷ್ಯವಾಗಿ ಪರಿಗಣಿಸಲು ಅವಕಾಶವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?