ಮಹಿಳಾ ಪಡೆಗೆ ಬಿಪಿಇಟಿ ಕಡ್ಡಾಯ
Team Udayavani, Jun 17, 2020, 8:41 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳು, ಮಹಿಳಾ ಕೆಡೆಟ್ಗಳು ಹಾಗೂ ನೇಮಕಾತಿಗಳಿಗೆ ದೈಹಿಕ ಸಮರ ದಕ್ಷತಾ ಪರೀಕ್ಷೆಯನ್ನು (ಬಿಪಿಇಟಿ) ಕಡ್ಡಾಯಗೊಳಿಸಲಾಗಿದೆ. 2009ರ ಮೊದಲು ನಿಯೋಜನೆಗೊಂಡ ಹಾಗೂ 35 ವರ್ಷ ಮೇಲ್ಪಟ್ಟ ಮಹಿಳಾ ಅಧಿಕಾರಿಗಳಿಗೂ ಬಿಪಿಇಟಿ ಕಡ್ಡಾಯಮಾಡಿ ಡೈರೆಕ್ಟೊರೇಟ್ ಜನರಲ್ ಆಫ್ ಮಿಲಿಟರಿ ಟ್ರೈನಿಂಗ್ (ಡಿಜಿಎಂಟಿ) ಹೊಸ ನಿರ್ದೇಶನಗಳನ್ನು ಜಾರಿಗೊಳಿಸಿದೆ.
ಏನಿದು ಬಿಪಿಇಟಿ?: ಇದು ದೈಹಿಕ ಪರೀಕ್ಷೆಗಳ ಸರಣಿ. ಅಧಿಕಾರಿಗಳಿಗೆ, ಸೈನಿಕರಿಗೆ ಮಿಲಿಟರಿ ಕ್ಷಮತೆ ಕಾಯ್ದುಕೊಳ್ಳಲು ಈ ಪರೀಕ್ಷೆ ನೆರವಾಗಲಿದೆ. 5 ಕಿ.ಮೀ. ಓಟ, 60 ಮೀಟರ್ ಓಟ (ಸ್ಪ್ರಿಂಟ್), ಅಡ್ಡವಾಗಿ ಕಟ್ಟಿದ ಹಗ್ಗವನ್ನು ಹಾದು ಹೋಗುವುದು- ಇತ್ಯಾದಿ ಪರೀಕ್ಷೆಗಳು ಮಹಿಳಾ ಅಧಿಕಾರಿಗಳಿಗೆ ಕಡ್ಡಾಯವಾಗಿವೆ. 1500 ಮೀಟರ್ ಅನ್ನು 30 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಿದರೆ ಅತ್ಯುತ್ತಮ ಶ್ರೇಣಿ, 31 ನಿಮಿಷ 30 ಸೆಕೆಂಡಿನಲ್ಲಿ ಕ್ರಮಿಸಿದರೆ ಉತ್ತಮ ಶ್ರೇಣಿ, 33 ನಿಮಿಷದಲ್ಲಿ ಗುರಿ ತಲುಪಿದರೆ ತೃಪ್ತಿಕರ ಶ್ರೇಣಿ ಎಂಬ ಮಾನದಂಡ ನಿಗದಿಪಡಿಸಲಾಗಿದೆ. ಈ ಮೊದಲು (2011ರ ನಿರ್ದೇಶನ) ಎಲ್ಲ ಓಟಗಳಿಗೆ 2 ನಿಮಿಷ ಹೆಚ್ಚು ಕಾಲಾವಧಿ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ