ಹೃದಯ ಸ್ತಂಭನವಾದ್ರೂ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಮಾಡಿದ ಪೈಲಟ್
Team Udayavani, Jun 26, 2018, 5:30 PM IST
ಕೋಲ್ಕತಾ: ಆಗಸದ ಮಧ್ಯೆ ವಿಮಾನ ಹಾರಾಟ ನಡೆಸುತ್ತಿದ್ದ ವೇಳೆಯೇ ಪೈಲಟ್ ಗೆ ದಿಢೀರ್ ಆಗಿ ತೀವ್ರ ಹೃದಯ ಸ್ತಂಭನಕ್ಕೊಳಗಾಗಿದ್ದರು. ಆದರೆ ಧೈರ್ಯಗೆಡದ ಕ್ಯೂಬಾ ಮೂಲದ ಇಂಡಿಗೋ ವಿಮಾನದ ಪೈಲಟ್ ನೂರಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೋಲ್ಕತಾದ ನೇತಾಜಿ ಸುಭಾಶ್ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಿ ಜೀವ ಉಳಿಸಿದ್ದ ಘಟನೆ ಶನಿವಾರ ಸಂಜೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳ ಮಾಹಿತಿ ಪ್ರಕಾರ, ಹೃದಯ ಸ್ಥಂಭನಕ್ಕೊಳಗಾಗಿದ್ದ ಪೈಲಟ್ ಸಿಲ್ವಿಯೋ ಡಿಯಾಝ್ ಕೋಸ್ಟಾ(63) ಅವರು ವಿಮಾನವನ್ನು ಕೋಲ್ಕತಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿದ್ದರು. ಇಂಫಾಲದಿಂದ ವಿಮಾನ ಆಗಮಿಸಿತ್ತು.
ಎದೆನೋವು ತೀವ್ರವಾಗಿರುವುದಾಗಿ ಸಹ ಪೈಲಟ್ ಬಳಿ ಸಿಲ್ವಿಯೋ ಹೇಳಿಕೊಂಡಿದ್ದರು. ಅಂತೂ ಕೊನೆಗೆ ಸಹ ಪೈಲಟ್ ಅವರ ನೆರವಿನೊಂದಿಗೆ ವಿಮಾನವನ್ನು ಸಂಜೆ 4.45ಕ್ಕೆ ಸುರಕ್ಷಿತವಾಗಿ ಸಿಲ್ವಿಯೋ ಅವರು ಲ್ಯಾಂಡ್ ಮಾಡಿರುವುದಾಗಿ ವರದಿ ವಿವರಿಸಿದೆ.
ಕೂಡಲೇ ಅವರನ್ನು ವಿಮಾನ ನಿಲ್ದಾಣದೊಳಗಿರುವ ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ದು ಪರೀಕ್ಷೆ ನಡೆಸಿದ್ದರು. ಬಳಿಕ ವೈದ್ಯರು ಕೂಡಲೇ ಸ್ಥಳೀಯ ಚಾರ್ನೋಕ್ ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್