ಜಿಎಸ್ಟಿ ವ್ಯಾಪ್ತಿಯಡಿ ತಂದರೂ ಇಂಧನ ಅಗ್ಗವಾಗದು: ಬಿಹಾರ ಡಿಸಿಎಂ
Team Udayavani, May 26, 2018, 7:04 PM IST
ಪಟ್ನಾ : ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಿದರೂ ಇಂಧನ ಬೆಲೆಯಲ್ಲಿ ಯಾವುದೇ ದೊಡ್ಡ ವ್ಯತ್ಯಾಸವಾಗದು ಎಂದು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಜನರಲ್ಲಿ ಒಂದು ತಪ್ಪು ಭಾವನೆ ಇದೆ; ಅದೆಂದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ಅಡಿ ತಂದರೆ ಪೆಟ್ರೋಲ್, ಡೀಸಿಲ್ ದರಗಳು ಅಗ್ಗವಾಗುತ್ತವೆ ಎಂದು. ಆದರೆ ಅದು ಸರಿಯಲ್ಲ ಎಂದು ಮೋದಿ ಹೇಳಿದರು.
ವಿಶ್ವಾದ್ಯಂತದ ಕ್ರಮ ಹೇಗಿದೆ ಎಂದರೆ ಜಿಎಸ್ಟಿ ಅನುಷ್ಠಾನಗೊಂಡಿರುವ ದೇಶಗಳಲ್ಲಿ ಜಿಎಸ್ಟಿ ದರದ ಮೇಲೆ ತೆರಿಗೆ ವಿಧಿಸುವುದಕ್ಕೆ ಆಯಾ ರಾಜ್ಯ ಸರಕಾರಗಳಿಗೆ ಅವಕಾಶವಿದೆ. ಹಾಗಾಗಿ ನಮ್ಮ ದೇಶದಲ್ಲಿ ಕೂಡ ಪೆಟ್ರೋಲಿಯ, ಉತ್ಪನ್ನಗಳನ್ನು ಜಿಎಸ್ಟಿ ಅಡಿ ತಂದ ಮಾತ್ರಕ್ಕೆ ಅವುಗಳ ಬೆಲೆ ಕಡಿಮೆಯಾಗುವ ಸಾಧ್ಯತೆ ಇಲ್ಲ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್