ಭಾರತದಲ್ಲಿರುವುದು ಬ್ರಿಟಿಷರು ಗಾಂಧಿ,ನೆಹರೂ ಇರಿಸಿದ್ದ ಜೈಲುಗಳೇ: ಮೋದಿ

Team Udayavani, May 28, 2018, 7:27 PM IST

ಹೊಸದಿಲ್ಲಿ : ಒಂಬತ್ತು ಸಾವಿರ ಕೋಟಿ ರೂ. ಬ್ಯಾಂಕ್‌ ಸಾಲ ವಂಚನೆಗೈದು ಲಂಡನ್‌ಗೆ ಪರಾರಿಯಾಗಿರುವ ಮದ್ಯ ದೊರೆ, ಅನಿವಾಸಿ ಭಾರತೀಯ, ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವ ವಿಷಯದಲ್ಲಿ  ಬ್ರಿಟನ್‌ ನ್ಯಾಯಾಲಯ ‘ಭಾರತೀಯ ಜೈಲುಗಳ ಸ್ಥಿತಿಗತಿ’ ಬಗ್ಗೆ  ಪ್ರಶ್ನಿಸಿರುವುದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರಿಗೆ ಖಡಕ್‌ ಉತ್ತರ ಕೊಟ್ಟಿರುವ ಸಂಗತಿ ಇದೀಗ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ಮೂಲಕ ಬಹಿರಂಗಕ್ಕೆ ಬಂದಿದೆ.

“ಭಾರತದ ಸ್ವಾತಂತ್ರ್ಯಕ್ಕೆ ಮುನ್ನ ಆಗಿನ ಬ್ರಿಟಿಷ್‌ ಸರಕಾರ ರಾಷ್ಟ್ರೀಯ ನಾಯಕರಾದ ಮಹಾತ್ಮ ಗಾಂಧೀಜಿ ಮತ್ತು ಜವಾಹರಲಾಲ್‌ ನೆಹರೂ ಅವರನ್ನು ಬಂಧನದಲ್ಲಿ ಇರಿಸಿದ್ದ ಜೈಲುಗಳು ಇವೇ ಆಗಿವೆ’ ಎಂದು ಪ್ರಧಾನಿ ಮೋದಿ ಅವರು ಬ್ರಿಟಿಷ್‌ ಪ್ರಧಾನಿ ತೆರೆಸಾ ಮೇ ಅವರಿಗೆ ನೆನಪಿಸಿಕೊಟ್ಟಿದ್ದಾರೆ  ಎಂದು ಸಚಿವ ಸುಶ್ಮಾ ಸ್ವರಾಜ್‌ ಇಂದು ಸೋಮವಾರ ಬಹಿರಂಗಪಡಿಸಿದರು. 

ಗಾಂಧಿ, ನೆಹರೂ ಅವರನ್ನು ಬಂಧನಲ್ಲಿ ಇರಿಸುವಾಗಿನ ಭಾರತೀಯ ಜೈಲುಗಳ ಸ್ಥಿತಿ ಗತಿ ಬಗ್ಗೆ ಇಲ್ಲದಿದ್ದ ಕಾಳಜಿ ಈಗ ವಿಜಯ್‌ ಮಲ್ಯ ಅವರನ್ನು ಬಂಧಿಸಿಡುವ ಜೈಲಿನ ಬಗ್ಗೆ  ಬ್ರಿಟಿಷ್‌ ನ್ಯಾಯಾಲಯಗಳಿಗೆ ಬಂದುದಾದರೂ ಹೇಗೆ ಮತ್ತು ಏಕೆ ಎಂದು ಪ್ರಧಾನಿ ಮೋದಿ, ಬ್ರಿಟಿಷ್‌ ಪ್ರಧಾನಿಯನ್ನು ಪ್ರಶ್ನಿಸಿರುವುದಾಗಿ ಸ್ವರಾಜ್‌ ತಿಳಿಸಿದರು. ಮೋದಿ ಅವರ ಈ ಸಂದೇಶವನ್ನು ಈ ವರ್ಷ ಎಪ್ರಿಲ್‌ ನಲ್ಲಿ ಲಂಡನ್‌ನಲ್ಲಿ ಉಭಯ ನಾಯಕರು ಭೇಟಿಯಾದ ಸಂದರ್ಭದಲ್ಲಿ ತಿಳಿಸಲಾಗಿತ್ತು.

12 ಭಾರತೀಯ ಬ್ಯಾಂಕುಗಳನ್ನು ಒಳಗೊಂಡ ಎಸ್‌ಬಿಐ ನೇತೃತ್ವದ ಕನ್‌ಸಾರ್ಶಿಯಮ್‌, ವಿಜಯ್‌ ಮಲ್ಯ ವಿರುದ್ಧದ ಗಡೀಪಾರು ದಾವೆಯನ್ನು ಜಯಿಸಿದ್ದು ಈಗಿನ್ನು ಅವು ಮಲ್ಯ ಅವರಿಂದ ತಮಗಿರುವ ಬಾಕಿ ಸಾಲವನ್ನು ವಸೂಲಿ ಮಾಡಬಹುದಾಗಿದೆ ಎಂದು ಸ್ವರಾಜ್‌ ಹೇಳಿದರು. 

ವಿಜಯ್‌ ಮಲ್ಯ ಅವರು ದೇಶದ ಹಣಕಾಸು ಸಂಸ್ಥೆಗಳಿಗೆ ವಂಚನೆಗೈದು ವಿದೇಶಕ್ಕೆ ಪಲಾಯನ ಮಾಡಿರುವ ಹಾಗೂ ಜಾರಿ ನಿರ್ದೇಶನಾಲಯದಿಂದ ಕ್ರಿಮಿನಲ್‌ ವಿಚಾರಣೆಗೆ ಗುರಿಯಾಗಿರುವ 53 ಮಂದಿಯಲ್ಲಿ ಒಬ್ಬರಾಗಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ನಗರದಲ್ಲಿ ಆಸ್ತಿ ಮಾಲೀಕರಿಂದ ಆಸ್ತಿ ತೆರಿಗೆಯೊಂದಿಗೆ ಶೇ.2ರಷ್ಟು ಭೂ ಸಾರಿಗೆ ಉಪ ಕರ (ಸೆಸ್‌) ವಸೂಲಿ ಮಾಡುವ ಬಿಬಿಎಂಪಿ ನಿರ್ಣಯಕ್ಕೆ ಸಾರ್ವಜನಿಕ ವಲಯದಿಂದ...

  • ಬೆಂಗಳೂರು: ನೆರೆ ಸಂತ್ರಸ್ತರು ತ್ವರಿತವಾಗಿ ಎರಡನೇ ಕಂತಿನ ಹಣವನ್ನು ಪಡೆದು ಮನೆಗಳನ್ನು ಮೂರು ತಿಂಗಳಲ್ಲಿ ನಿರ್ಮಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌...

  • ಮುಖ್ಯಮಂತ್ರಿ ಯಡಿಯೂರಪ್ಪ ಅವರ ದೆಹಲಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾದ ಚರ್ಚೆ ಗರಿಗೆದರುತ್ತಿದ್ದು, ಸಚಿವಾಕಾಂಕ್ಷಿಗಳಲ್ಲಿ...

  • ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಶೇ.49 ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು...

  • ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಶಿಕ್ಷಕರು ಮುಂಬಡ್ತಿಯಿಂದಲೂ ವಂಚಿತರಾಗುತ್ತಿದ್ದಾರೆ. 2006ಕ್ಕಿಂತ...