ದೀಪಾವಳಿಯಂದು ಲಂಡನ್‌ನಲ್ಲಿ ಪ್ರತಿಭಟನೆ: ಭಾರತ ತೀವ್ರ ಆಕ್ಷೇಪ

Team Udayavani, Oct 24, 2019, 7:11 AM IST

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ದಲ್ಲಿ ಕೇಂದ್ರ ಸರಕಾರ 370ನೇ ವಿಧಿ ಹಿಂಪಡೆದಿರುವುದನ್ನು ವಿರೋಧಿಸಿ ಲಂಡನ್‌ನಲ್ಲಿ ದೀಪಾವಳಿಯಂದು ಪ್ರತಿಭಟನೆ ಹಮ್ಮಿ ಕೊಳ್ಳಲಾಗಿದೆ. ಇದರ ಕುರಿತು ಬ್ರಿಟನ್‌ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

ಈ ಹಿಂದೆ ಇದೇ ರೀತಿ ನಡೆದ ಪ್ರತಿಭಟನೆಗಳಲ್ಲಿ ಭಾರತೀಯ ರಾಯಭಾರ ಕಚೇರಿಯ ಮೇಲೆ ಕಲ್ಲೆಸೆಯಲಾಗಿತ್ತು. ಇಂಗ್ಲೆಂಡ್‌ನ‌ಲ್ಲಿರುವ ಪಾಕಿಸ್ಥಾನದ ಪರ ಸಂಘಟನೆಗಳು ಈ ಪ್ರತಿಭಟನೆಗಳನ್ನು ಆಯೋಜಿಸಿದ್ದವು.

ಅ. 27ರಂದು ನಡೆಯಲಿರುವ ಪ್ರತಿಭಟನೆಯ ವೇಳೆ ಲಂಡನ್‌ನಲ್ಲಿರುವ ಹೈಕಮಿಷನ್‌ ಸಿಬಂದಿಯ ಸುರಕ್ಷತೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಈ ಪ್ರತಿಭಟನೆಗಳಿಂದ ಭಾರತ ಮತ್ತು ಇಂಗ್ಲೆಂಡ್‌ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಇನ್ನೊಂದೆಡೆ, ಹಿಂಸೆ ಮತ್ತು ಪ್ರಚೋದನೆಯನ್ನು ಒಪ್ಪಿಕೊಳ್ಳಲಾಗದು ಎಂದು ಯುಕೆ ಪ್ರಧಾನಿ ಬೋರಿಸ್‌ ಜಾನ್ಸನ್‌ ಹೇಳಿದ್ದು, ಪ್ರತಿಭಟನೆಗೆ ಬೆಂಬಲವಿಲ್ಲ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ