ಅರೆಸೇನಾ ಪಡೆ: ತೆರಿಗೆ ವಿನಾಯ್ತಿ

Team Udayavani, Apr 4, 2019, 6:00 AM IST

ಹೊಸದಿಲ್ಲಿ: ಸಿಆರ್‌ಪಿಎಫ್, ಬಿಎಸ್‌ಎಫ್ ಸೇರಿ ಅರೆಸೇನಾ ಪಡೆಯ ಸಿಬಂದಿಗೆ ನೀಡಲಾಗುತ್ತಿರುವ ಊಟೋಪಚಾರ ಭತ್ಯೆ ಮತ್ತು ಪರಿಶ್ರಮ ಭತ್ಯೆ ಮೇಲಿನ ಆದಾಯ ತೆರಿಗೆ ವಿನಾಯಿತಿಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಇದು ಜಾರಿಗೊಂಡಲ್ಲಿ 9 ಲಕ್ಷ ಸಿಬಂದಿಗೆ ಅನುಕೂಲ ವಾಗಲಿದೆ. ಈ ಸಂಬಂಧ ಗೃಹ ಇಲಾಖೆ ಸಲ್ಲಿಸಿದ ಪ್ರಸ್ತಾವನೆ ಪರಿಗಣಿ ಸುವುದಾಗಿ ವಿತ್ತ ಸಚಿವಾಲಯ ತಿಳಿಸಿದೆ.

ಈ ಬಗ್ಗೆ ಹಲವು ಕಾಲದಿಂದಲೂ ಬೇಡಿಕೆ ಕೇಳಿ ಬಂದಿತ್ತು. ಅಸ್ಸಾಂ ರೈಫ‌ಲ್ಸ್‌ ಮತ್ತು ಎನ್‌ಎಸ್‌ಜಿ ಪಡೆಗೆ ಉಚಿತ ಆಹಾರ ಒದಗಿಸಲಾಗುತ್ತದೆ. ಆದರೆ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿಗೆ ಇದಕ್ಕೆ ಭತ್ಯೆ ರೂಪದಲ್ಲಿ ನಿಗದಿತ ಮೊತ್ತ ನೀಡಲಾಗುತ್ತದೆ. ಗೆಜೆಟೆಡ್‌ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ದರ್ಜೆಯ ಸಿಬ್ಬಂದಿಗೆ ಮಾಸಿಕ 3 ಸಾವಿರ ರೂ. ಊಟೋಪಚಾರ ಭತ್ಯೆ ನೀಡ ಲಾಗುತ್ತಿದೆ. ಇದಕ್ಕೆ ತೆರಿಗೆ ವಿನಾಯ್ತಿ ನೀಡಬೇಕು ಎಂದು ವೇತನ ಆಯೋಗವೂ ಶಿಫಾರಸು ಮಾಡಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ