ಭಾರತದ ಗಡಿಯೊಳಗಡೆ ಬಂದ ಪಾಕಿಸ್ತಾನದ ಪರಿವಾಳ : FIR ದಾಖಲಿಸುವಂತೆ ಸೇನೆ ಒತ್ತಾಯ!
Team Udayavani, Apr 21, 2021, 9:29 PM IST
ಅಮೃತಸರ : ಅಕ್ರಮವಾಗಿ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಗ್ಗಿದ ಪಾರಿವಾಳದ ವಿರುದ್ಧ FIR ದಾಖಲಿಸಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕೋರಿದ್ದು, ಈ ಸಂಬಂಧ ಪಂಜಾಬ್ ಪೊಲೀಸರು ಕಾನೂನು ಅಭಿಪ್ರಾಯ ಕೋರಿದ್ದಾರೆ.
ಕಳೆದ ಶನಿವಾರ ಇಲ್ಲಿನ ರೊರಾವಾಲಾ ಪೋಸ್ಟ್ ನಲ್ಲಿರುವ ಗಡಿ ಭದ್ರತಾ ಪಡೆಯ ಜವಾನ್ ಭುಜದ ಮೇಲೆ ಪಾರಿವಾಳ ಕೂತಿದೆ. ಅಲ್ಲದೆ ಪಾರಿವಾಳವು ಗಡಿಯುದ್ದ ಹಾರಟ ನಡೆಸಿದೆ.
ಅನುಮಾನಕ್ಕೆ ಕಾರಣವಾದ ವಿಚಾರ ಏನೆಂದರೆ ಆ ಪಾರಿವಾಳದ ಕಾಲಿಗೆ ಚಿಕ್ಕ ಕಾಗದದ ತುಣುಕನ್ನು ಅಂಟಿಸಲಾಗಿದ್ದು, ಅದರಲ್ಲಿ ಕಾಂಟ್ಯಾಕ್ಟ್ ನಂಬರ್ ಅನ್ನು ಬರೆಯಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಬಿಎಸ್ ಎಫ್ ಸಿಬ್ಬಂದಿಯು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಧ್ರುವ್ ದಹಿಯಾ, ಪಾರಿವಾಳದ ವಿರುದ್ಧ FIR ದಾಖಲಿಸುವಂತೆ ಬಿಎಸ್ ಎಫ್ ಒತ್ತಾಯ ಮಾಡುತ್ತಿದೆ. ಆದ್ರೆ ಪಾರಿವಾಳವು ಪಕ್ಷಿಯಾಗಿದ್ದರಿಂದ ಇದರ ವಿರುದ್ಧವಾಗಿ FIR ದಾಖಲಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ಕಾನೂನು ತಜ್ಞರಿಗೆ ಸೂಚಿಸುವುದಾಗಿ ಧ್ರುವ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಿರೀಕ್ಷಣಾ ಜಾಮೀನು: ಮಾಡಾಳ್ ವಿರೂಪಾಕ್ಷಪ್ಪಗೆ ಸುಪ್ರೀಂ ನೋಟಿಸ್ ಜಾರಿ
ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
ರಾಘವ್ ಛಡ್ಡಾ-ಪರಿಣಿತಿ ಛೋಪ್ರಾ ಶೀಘ್ರವೇ ಎಂಗೇಜ್