ಮತ್ತೊಮ್ಮೆ ಪಾಕ್ ನ ISI ಸಂಚು ವಿಫಲ: ಗ್ರೆನೇಡ್, ರೈಫಲ್ ವಶಕ್ಕೆ; ಗಡಿಯಲ್ಲಿ ನಡೆದಿದ್ದೇನು?
ರಥುವಾ ಗ್ರಾಮದ ಬಳಿ ಪಾಕ್ ನ ಡ್ರೋನ್ ಅನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ
Team Udayavani, Jun 20, 2020, 10:50 AM IST
ನವದೆಹಲಿ:ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ, ಚೀನಾ ನಡುವೆ ಸಂಘರ್ಷ ಮುಂದುವರಿದಿರುವ ನಡುವೆಯೇ ಶನಿವಾರ ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಸಮೀಪ ಪಾಕಿಸ್ತಾನದ ಡ್ರೋನ್ ಅನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿರುವ ಘಟನೆ ನಡೆದಿದೆ.
ಗಡಿಯಲ್ಲಿ ಪಾಕ್ ನ ಡ್ರೋನ್ ಅನ್ನು ಹೊಡೆದುರುಳಿಸುವ ಮೂಲಕ ಗಡಿ ಭಾಗದಲ್ಲಿ ಮದ್ದು ಗುಂಡು, ಶಸ್ತ್ರಾಸ್ತ್ರಗಳನ್ನು ಕೆಳಕ್ಕೆ ಹಾಕುವ ಪಾಕ್ ಐಎಸ್ ಐನ ಸಂಚು ಮತ್ತೊಮ್ಮೆ ವಿಫಲಗೊಂಡಂತಾಗಿದೆ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ಕಥುವಾ ಜಿಲ್ಲೆಯ ಹೀರಾನಗರ್ ತಾಲೂಕಿನ ರಥುವಾ ಗ್ರಾಮದ ಬಳಿ ಪಾಕ್ ನ ಡ್ರೋನ್ ಅನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ ಎಂದು ತಿಳಿಸಿದೆ.
ರಥುವಾ ಪ್ರದೇಶದ ಹೀರಾನಗರ್ ಸೆಕ್ಟರ್ ಬಳಿ ಪಾಕಿಸ್ತಾನದ ಡ್ರೋನ್ ಹಾರಾಡುತ್ತಿರುವುದನ್ನು ಬಿಎಸ್ ಎಫ್ 19 ಬೆಟಾಲಿಯನ್ ಗಮನಕ್ಕೆ ಬಂದಿತ್ತು. ಕೂಡಲೇ ಎಂಟು ಸುತ್ತುಗಳ ಗುಂಡು ಹಾರಿಸುವ ಮೂಲಕ ಡ್ರೋನ್ ಅನ್ನು ನೆಲಕ್ಕೆ ಉರುಳಿಸಲಾಯ್ತು ಎಂದು ವರದಿ ವಿವರಿಸಿದೆ. ಈ ವೇಳೆ ಭಾರತೀಯ ಬಿಎಸ್ ಎಫ್ ಪಡೆ ಒಂದು ಎಂ-4 ಅಮೆರಿಕ ನಿರ್ಮಿತ ರೈಫಲ್, 2 ಮ್ಯಾಗಝೀನ್ಸ್, 60 ಸುತ್ತುಗಳ ಗುಂಡು, 7 ಗ್ರೆನೇಡ್ಸ್ ವಶಪಡಿಸಿಕೊಂಡಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್