ಬಿಎಸ್ಸೆನ್ನೆಲ್‌ ಬ್ರಾಡ್‌ಬ್ಯಾಂಡ್‌ ಸಮರ

ಜಿಯೋ ಸಂಸ್ಥೆಗೆ ಸೆಡ್ಡು ಹೊಡೆಯಲು ಮುಂದಾದ ಸರ್ಕಾರಿ ಕಂಪನಿ

Team Udayavani, Nov 4, 2019, 7:45 PM IST

ನವದೆಹಲಿ: ಕಡಿಮೆ ದರದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ನೀಡಲು ಮುಂದಾಗಿರುವ ಜಿಯೋ ಟೆಲಿಕಾಂ ಸಂಸ್ಥೆಗೆ ಸಡ್ಡು ಹೊಡೆಯಲು ನಿರ್ಧರಿಸಿರುವ ಬಿಎಸ್‌ಎನ್‌ಎಲ್‌, ಆ ನಿಟ್ಟಿನಲ್ಲಿ ಹೊಸತೊಂದು ಯೋಜನೆಯನ್ನು ಪರಿಚಯಿಸಿದೆ.

ಈ ಬ್ರಾಡ್‌ಬ್ಯಾಂಡ್‌ನ‌ಡಿ ಕೇಬಲ್‌ ಟಿವಿ ವೀಕ್ಷಿಸುವ ಮತ್ತೂಂದು ಸೌಲಭ್ಯವನ್ನೂ ಪಡೆಯಬಹುದು. ಇದಕ್ಕಾಗಿ, ಶ್ರೀದೇವಿ ಟೆಲಿವಿಷನ್‌ (ಎಸ್‌ಡಿವಿ) ಎಂಬ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೊಸ ಬ್ರಾಂಡ್‌ಬ್ಯಾಂಡ್‌ ಯೋಜನೆಗೆ “ಟ್ರಿಪಲ್‌ ಪ್ಲೇ ಬ್ರಾಡ್‌ಬ್ಯಾಂಡ್‌’ ಎಂದು ಹೆಸರಿಡಲಾಗಿದೆ. ಕೇಬಲ್‌ ಟಿವಿ ಸೌಲಭ್ಯಕ್ಕೆ ಕೇಬಲ್‌ ಟಿವಿ ಪ್ಯಾಕ್ಸ್‌ ಎಂದು ಕರೆಯಲಾಗಿದೆ. ಅತಿ ಕಡಿಮೆ ದರದಲ್ಲಿ ಎಸ್‌ಡಿ ಅಥವಾ ಎಚ್‌ಡಿ ವಾಹಿನಿಗಳನ್ನು ವೀಕ್ಷಿಸಲು ಅವಕಾಶವಿರುವುದು ಇದರ ವಿಶೇಷ.

ಟ್ರಿಪಲ್‌ ಪ್ಲೇ ಬ್ರಾಡ್‌ಬ್ಯಾಂಡ್‌ನ‌ ಯೋಜನೆಯನ್ನು 888 ರೂ. ನೀಡಿ ಗ್ರಾಹಕರು ಪಡೆದುಕೊಳ್ಳಬಹುದು. ಇದರಡಿಯಲ್ಲಿನ ಕೇಬಲ್‌ ಟಿವಿ ಪ್ಯಾಕ್ಸ್‌ಗಳನ್ನು 243 ಮೂಲ ಬೆಲೆಗಳಲ್ಲಿ ಪಡೆದುಕೊಳ್ಳಬಹುದಾಗಿದೆ.

ಟ್ರಿಪಲ್‌ ಪ್ಲೇ ಬ್ರಾಡ್‌ಬ್ಯಾಂಡ್‌, 96 ರೂ., 849 ರೂ., 1,277 ರೂ., 2,499 ರೂ., 4,499 ರೂ., 5,999 ರೂ., 9,999 ರೂ. ಹಾಗೂ 16,999 ರೂ. ಮಾದರಿಯ ಯೋಜನೆಗಳಲ್ಲಿ ಲಭ್ಯವಿದ್ದರೆ, ಕೇಬಲ್‌ ಟಿವಿ ಪ್ಯಾಕ್‌ಗಳು, ಎಸ್‌ಡಿ ಅಥವಾ ಎಚ್‌ಡಿ ಆಯ್ಕೆಯಡಿ 243 ರೂ.ಗಳಿಂದ 351 ರೂ.ಗಳವರೆಗೂ ಲಭ್ಯವಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ