ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಅಭ್ಯರ್ಥಿಯೇ ನಾಪತ್ತೆ!

15 ದಿನಗಳಿಂದ ಪ್ರಚಾರಕಣಕ್ಕೆ ಬಾರದೇ ತಲೆಮರೆಸಿಕೊಂಡಿರುವ ಅಭ್ಯರ್ಥಿ

Team Udayavani, May 15, 2019, 5:20 PM IST

ವಾರಾಣಸಿ: ಲೋಕಸಭಾ ಚುನಾವಣೆಯ ಅಂತಿಮ ಹಂತ ಬಾಕಿ ಉಳಿದಿದ್ದುಉತ್ತರ ಪ್ರದೇಶದಲ್ಲಿ ಪ್ರಚಾರ ಪರಾಕಾಷ್ಠೆಯನ್ನು ತಲುಪಿದೆ. ಇದೇ ವೇಳೆ ಬಿಎಸ್‌ಪಿ -ಎಸ್‌ಪಿ ಮೈತ್ರಿ ಅಭ್ಯರ್ಥಿಯೊಬ್ಬರು ನಾಪತ್ತೆಯಾಗಿದ್ದಾರೆ.

ಘೋಸಿ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಅತುಲ್‌ ರಾಯ್‌ ಕಳೆದ 15 ದಿನಗಳಿಂದ ಪ್ರಚಾರಕ್ಕೆ ಬಾರದೇ ನಾಪತ್ತೆಯಾಗಿದ್ದಾರೆ.  ಮೇ 1 ರಂದು ವಿದ್ಯಾರ್ಥಿನಿಯೊಬ್ಬರು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ರಾಯ್‌ ವಿರುದ್ಧ  ದೂರು ದಾಖಲಿಸಿದ ಬಳಿಕ  ತಲೆ ಮರೆಸಿಕೊಂಡಿದ್ದಾರೆ.

ಬಂಧನ ಭೀತಿಯಿಂದ ರಾಯ್‌ ತಲೆ ಮರೆಸಿಕೊಂಡಿದ್ದಾರೆ.ಆದರೆ ಪಕ್ಷದ ಕಾರ್ಯಕರ್ತರು ಮಾತ್ರ ರಾಯ್‌ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ. ರಾಯ್‌ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ಬಿಎಸ್‌ಪಿ ಹೇಳಿದೆ.

ಕಾರ್ಯಕರ್ತರಿಗೆ ರಾಯ್‌ ಪರ ಮತಯಾಚನೆ ಮುಂದುವರಿಸಲು ಮಾಯಾವತಿ ಮತ್ತು ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಅವರು ಸೂಚನೆ ನೀಡಿದ್ದಾರೆ.

ರಾಯ್‌ ಮಲೇಷ್ಯಾಗೆ ಪರಾರಿಯಾಗಿರಬಹುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದು, ಅವರ ವಿರುದ್ಧ ಲುಕ್‌ಔಟ್‌ ನೊಟೀಸ್‌ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.

ರಾಯ್‌ ಪರ ವಕೀಲರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು ಮೇ 23 ರ ವರೆಗೆ ಅವರನ್ನು ಬಂಧಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ