ಬುಲಂದ್‌ ಶಹರ್‌ ದೊಂಬಿ,ಪೊಲೀಸ್‌ ಹತ್ಯೆ ;ಪ್ರಮುಖ ಆರೋಪಿ ಅರೆಸ್ಟ್‌ 

Team Udayavani, Jan 1, 2019, 8:28 AM IST

ಲಕ್ನೋ: ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಹಿಂಸಾಚಾರದ ವೇಳೆ ಪೊಲೀಸ್‌ ಅಧಿಕಾರಿ ಮತ್ತು ಇನ್ನೋರ್ವರ ಹತ್ಯೆಗೆ ಕಾರಣವಾಗಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿ ಕಲುವಾ ಎನ್ನುವವನಾಗಿದ್ದು, ಇನ್ಸ್‌ಪೆಕ್ಟರ್‌ ಸುಬೋಧ್‌ ಸಿಂಗ್‌ ಅವರನ್ನು ಕೊಡಲಿಯಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾನೆ ಎಂಬ ಆರೋಪ ಹೊತ್ತಿದ್ದಾನೆ.

ಕಲುವಾನ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಆತನನ್ನು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.

ತನಿಖೆ ವೇಳೆ ಸುಬೋದ್‌ ಸಿಂಗ್‌ ಅವರನ್ನು ಕಲುವಾ ಹತ್ಯೆಗೈದಿದ್ದಾನೆ ಎನ್ನುವುದು ತಿಳಿದು ಬಂದಿದ್ದು, ಹೀಗಾಗಿ ಆತನನ್ನು ಬಂಧಿಸಿದ್ದೇವೆ ಎಂದು ಬುಲಂದ್‌ ಶಹರ್‌ನ ಹೆಚ್ಚುವರಿ ಎಸ್‌ಪಿ ಅತುಲ್‌ ಕುಮಾರ್‌ ಶ್ರೀವಾತ್ಸವ ಅವರು ಹೇಳಿದ್ದಾರೆ. ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ತಿಳಿಸಿದ್ದಾರೆ.

ಗೋಹತ್ಯೆಯ ಕುರಿತಾಗಿ ಹಿಂಸಾಚಾರ ಭುಗಿಲೆದ್ದು ಇನ್ಸ್‌ಪೆಕ್ಟರ್‌ ಮತ್ತು ಇನ್ನೋರ್ವ ವ್ಯಕ್ತಿಯ ಹತ್ಯೆಗೆ ಕಾರಣವಾಗಿತ್ತು.

ಸುಬೋಧ್‌ ಸಿಂಗ್‌ ಅವರಿಗೆ ಗುಂಡಿಕ್ಕಿದ ಆರೋಪಿಯನ್ನೂ ಬಂಧಿಸಲಾಗಿದೆ. ಇದುವರೆಗೆ ಹಿಂಸಾಚಾರ ಮತ್ತು ಹತ್ಯೆಗೆ ಸಂಬಂಧಿಸಿ ಬಂಧಿತರ ಸಂಖ್ಯೆ 30 ಕ್ಕೇರಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ