ಪೂರ್ವ ಕರಾವಳಿಗೆ ಬುಲ್ ಬುಲ್ ಚಂಡಮಾರುತ ಭೀತಿ
Team Udayavani, Nov 7, 2019, 8:36 AM IST
ಪುರಿ: ಭಾರತದ ಪೂರ್ವ ಕರಾವಳಿಗೆ ಬುಲ್ ಬುಲ್ ಚಂಡಮಾರುತದ ಭೀತಿ ಎದುರಾಗಿದೆ. ಒರಿಸ್ಸಾ ರಾಜ್ಯದ ಕನಿಷ್ಠ 14 ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ಇದರಿಂದಾಗಿ ಚಂಡಮಾರುತ ಏಳುವ ಸಾಧ್ಯತೆಯಿದೆ. ಇದರಿಂದಾಗಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೂಚನೆ ನೀಡಿದೆ.