ಖಾಸಗಿ ಬಸ್-‌ ಟ್ರಕ್‌ ಡಿಕ್ಕಿ: ಆರು ಜನರ ದುರ್ಮರಣ, ಹಲವರು ಗಂಭೀರ

Team Udayavani, Sep 12, 2019, 10:20 AM IST

ಸತಾರ: ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ  ಮಹಾರಾಷ್ಟ್ರದ ಸತಾರದಲ್ಲಿ ನಡೆದ ಖಾಸಗಿ ಬಸ್-‌ ಟ್ರಕ್‌ ನಡುವಿನ ಭೀಕರ ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭಿರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ.

ಹುಕ್ಕೇರಿ ತಾಲೂಕಿನ ಸಂಕೇಶ್ವರದ ಬಸವಂತ ಗಲ್ಲಿಯ ವಿಶ್ವನಾಥ ವಿರೂಪಾಕ್ಷಿ ಗಡ್ಡಿ (58), ಡಾ.‌ ಸಚೀನ್ ಗೋಂಡಾ, ಬೆಳಗಾವಿ ನಗರ ಅನಗೋಳನ ಅಬ್ಬಾಸ ಅಲಿ ಕಾಟಗಿ(43), ವಡಗಾಂವಿಯ ರವೀಂದ್ರ ಕರೇಂಗಾರ(45) ಹಾಗೂ ಸಾತಾರಾ ಜಿಲ್ಲೆಯ ಜಾವಳಿ ತಾಲೂಕಿನ ದೇವೇವಾಡಿ ಗ್ರಾಮದ ಅಶೋಕ ರಾಮಚಂದ್ರ ಜುನಘರೆ (50) ಮೃತರು. ಇನ್ನೂ ಒಬ್ಬರ ಗುರುತು ಪತ್ತೆ ಆಗಿಲ್ಲ.

ಖಾಸಗಿ ಬಸ್‌ ಮುಂಬೈನಿಂದ ಬೆಳಗಾವಿಗೆ ಚಲಿಸುತ್ತಿತ್ತು ಎಂದು ತಿಳಿದು ಬಂದಿದೆ. ಲಾರಿ ಪುಣೆಯಿಂದ ಕೊಲ್ಹಾಪುರಕ್ಕೆ ಸಾಗುತ್ತಿತ್ತು ಎಂದು ವರದಿಯಾಗಿದೆ.

ಮುಂದೆ ಸಾಗುತ್ತಿದ್ದ ಲಾರಿಯ ಹಿಂಬಾಗಕ್ಕೆ ಬಸ್‌ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ