1.06 ಬಿಲಿಯನ್ ಡಾಲರ್ ಕೊಟ್ಟರೆ ಕೇಸು ವಾಪಸ್: ಕೈರ್ನ್ ಎನರ್ಜಿ
Team Udayavani, Sep 7, 2021, 9:30 PM IST
ನವದೆಹಲಿ:ಭಾರತ ಸರ್ಕಾರ ಶೀಘ್ರವೇ 1.06 ಬಿಲಿಯನ್ ಡಾಲರ್ ಮೊತ್ತವನ್ನು ಪಾವತಿಸುವ ವಿಶ್ವಾಸವಿದೆ. ಈ ಮೊತ್ತ ಪಾವತಿ ಮಾಡಿದರೆ, ವಿದೇಶಗಳಲ್ಲಿರುವ ಕೇಂದ್ರದ ಆಸ್ತಿ ವಶಪಡಿಸಿಕೊಳ್ಳುವುದನ್ನು ಕೈ ಬಿಡುವುದಾಗಿ ಕೈರ್ನ್ ಎನರ್ಜಿ ಮಂಗಳವಾರ ಹೇಳಿದೆ.
ಭಾರತದ 1.06 ಶತ ಕೋಟಿ ಡಾಲರ್ ಮರು ಪಾವತಿ ಆಫರ್ ಅನ್ನು ನಾವು ಸ್ವೀಕರಿಸಿದ್ದು, ತೆರಿಗೆ ವಿವಾದ ಶೀಘ್ರವೇ ಇತ್ಯರ್ಥಗೊಳ್ಳಲಿದೆ ಎಂದು ಕೈರ್ನ್ ಎನರ್ಜಿ ಸಿಇಒ ಸಿಮೊನ್ ಥಾಮ್ಸನ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಜತೆಗೆ ದೀರ್ಘ ಕಾಲದಿಂದ ಇರುವ ವಿವಾದ ಮುಕ್ತಾಯ ಗೊಳ್ಳುವುದರ ಜತೆಗೆ ವಿಶೇಷ ಡಿವಿಡೆಂಡ್ ವಿತರಿಸಲೂ ಈ ಸೂತ್ರ ಅನುಕೂಲವಾಗಲಿದೆ ಎಂದಿದ್ದಾರೆ. ಈ ಬೆಳವಣಿಗೆಯಿಂದಾಗಿ ಲಂಡನ್ ಷೇರುಮಾರುಕಟ್ಟೆಯಲ್ಲಿ ಕೈರ್ನ್ ಷೇರುಗಳು ಶೇ.8.2ರಷ್ಟು ಏರಿಕೆ ಕಂಡಿವೆ.
ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ರಿಕ್ಷಾ : ಓರ್ವ ಮಹಿಳೆ ಸಾವು, ಐವರು ಗಂಭೀರ
ಕೈರ್ನ್ ಇಂಡಿಯಾ 2006ರಲ್ಲಿ ಹೊರಡಿಸಿದ್ದ ಐಪಿಒಗೆ ತೆರಿಗೆ ಪಾವತಿಸುವಂತೆ ಅಂದಿನ ಕೇಂದ್ರ ಸರ್ಕಾರ ನೋಟಿಸ್ ನೀಡಿತ್ತು. ಇದೇ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಕೇಂದ್ರ ಸರ್ಕಾರಕ್ಕೆ 1.2 ಬಿಲಿಯನ್ ಡಾಲರ್ ಮೊತ್ತವನ್ನು ಬಡ್ಡಿಸಹಿತ ಪಾವತಿ ಮಾಡುವಂತೆ ಆದೇಶ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
MUST WATCH
ಹೊಸ ಸೇರ್ಪಡೆ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ
Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ
Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?