ಗುಜರಾತ್: ಫೈನಾನ್ಸ್ ಹಬ್ ಆಗಿ ಗಿಫ್ಟ್ ಸಿಟಿ ಅಭಿವೃದ್ಧಿ
Team Udayavani, Nov 30, 2022, 6:45 AM IST
ಗಾಂಧಿನಗರ: ಗುಜರಾತ್‌ನ ಸಬರ್‌ಮತಿ ನದಿಯ ಸಮೀಪ ತಲೆಎತ್ತಿರುವ ಗಿಫ್ಟ್ ಸಿಟಿ ಎಂದೇ ಖ್ಯಾತವಾಗಿರುವ ಗುಜರಾತ್ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್ ಸಿಟಿಯನ್ನು ಭಾರತದ ನೂತನ ಫೈನಾನ್ಸ್ ಹಬ್ ಆಗಿ ಪರಿವರ್ತಿಸಲು ಎಲ್ಲ ರೀತಿಯ ಸಹಕಾರಕ್ಕೆ ಸರಕಾರ ಮುಂದಾಗಿದೆ.
ಗುಜರಾತ್ ರಾಜಧಾನಿ ಗಾಂಧಿನಗರ ಮತ್ತು ಅಹ್ಮದಾಬಾದ್ ನಡುವಿನ 886 ಎಕ್ರೆ ಜಾಗವನ್ನು ಗಿಫ್ಟ್ ಸಿಟಿಗೆ ಮೀಸಲಿಡಲಾಗಿದೆ.
ಈಗಾಗಲೇ ಇಲ್ಲಿ ಜೆಪಿ ಮಾರ್ಗನ್, ಎಚ್‌ಎಸ್‌ಬಿಸಿ, ಡಾಯ್ ಬ್ಯಾಂಕ್ ಸೇರಿದಂತೆ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯಾರಂಭ ಮಾಡಿವೆ. ಇನ್ನಷ್ಟು ಕಂಪೆನಿಗಳು ಶೀಘ್ರದಲ್ಲೇ ತನ್ನ ಚಟುವಟಿಕೆಗಳನ್ನು ಆರಂಭಿಸಲಿವೆ.
ಅಕ್ಟೋಬರ್‌ನಲ್ಲಿ ಇಲ್ಲಿ 33 ಬಿಲಿಯನ್ ಡಾಲರ್‌ಗಳ ವ್ಯವ ಹಾರ ನಡೆದಿದೆ. ಇಲ್ಲಿ ಐಎಫ್ಎಸ್‌ಸಿ ಆರಂಭಿಸುವ ಉದ್ಯಮಿಗಳಿಗೆ ಸರಕಾರ ಒಂದು ದಶಕದ ವರೆಗೂ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡುವ ಆಫರ್ ಘೋಷಿಸಿದೆ. ಇದೇ ರೀತಿ ಕಂಪೆನಿಗಳು ಗಿಫ್ಟ್ ಸಿಟಿಯಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಅವರಿಗೆ ಅನೇಕ ಸೌಲಭ್ಯಗಳನ್ನು ಸರಕಾರ ಒದಗಿದೆ.