Udayavni Special

ಬತ್ತಿ ಹೋಗಲಿದ್ದಾಳೆಯೇ ಜೀವನದಿ ಕಾವೇರಿ?

Team Udayavani, Apr 30, 2019, 3:00 AM IST

battu

ನವದೆಹಲಿ: ಕನ್ನಡನಾಡಿನ ಜೀವನದಿಯಾಗಿರುವ ಕಾವೇರಿ ಇನ್ನು ಕೆಲವೇ ವರ್ಷಗಳಲ್ಲಿ ಬತ್ತಿ ಹೋಗಲಿದೆಯೇ ಎಂಬ ಹೊಸ ಪ್ರಶ್ನೆಯೊಂದನ್ನು ಕೇಂದ್ರ ಜಲ ಆಯೋಗ (ಸಿಡಬ್ಲೂಸಿ) ತಯಾರಿಸಿರುವ ವರದಿಯೊಂದು ಹುಟ್ಟುಹಾಕಿದೆ. ಮುಂದೊಂದು ದಿನ ಬತ್ತಿ ಹೋಗುವ ಭಾರತದ ಕೆಲವು ನದಿಗಳನ್ನು ಈ ವರದಿಯಲ್ಲಿ ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಕಾವೇರಿ ನದಿಯ ಹೆಸರನ್ನೂ ಉಲ್ಲೇಖೀಸಲಾಗಿರುವುದು ಹೊಸ ಆತಂಕಕ್ಕೆ ನಾಂದಿ ಹಾಡಿದೆ.

ಸಿಡಬ್ಲೂಸಿ ವರದಿಯಲ್ಲಿನ ದತ್ತಾಂಶದ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಬೀಸುತ್ತಿರುವ ಉಷ್ಣ ಹವೆ ಹೆಚ್ಚಾಗಿದ್ದು ಅದರ ಪರಿಣಾಮ, ಭಾರತದ ನದಿ, ಅಣೆಕಟ್ಟು ಹಾಗೂ ಇನ್ನಿತರ ಜಲಮೂಲಗಳ ನೀರಿನ ಪ್ರಮಾಣ ಶೇ. 21ರಷ್ಟು ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ಉತ್ತರ ಭಾರತದಲ್ಲಿ ಸಿಂಧೂ ನದಿ ಮತ್ತು ನರ್ಮದಾ ನದಿ, ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳನ್ನು ಆಶ್ರಯಿಸಿರುವ ಕೆಲವು ನದಿಗಳನ್ನು ಬಿಟ್ಟರೆ ಮಿಕ್ಕೆಲ್ಲಾ ನದಿಗಳಲ್ಲಿ ಈ ನೀರಿನ ಕೊರತೆ ಈಗಾಗಲೇ ಸೃಷ್ಟಿಯಾಗಿದೆ. ಗುಜರಾತ್‌ನ ಕಛ್, ತಾಪಿ, ಸಬರ್ಮತಿ ನದಿ, ಕರ್ನಾಟಕದಲ್ಲಿ ಹರಿಯುವ ಕಾವೇರಿ, ಗೋದಾವರಿ, ಕೃಷ್ಣಾ, ಛತ್ತೀಸ್‌ಗಡದ ಮಹಾನದಿ ಸೇರಿದಂತೆ ದೇಶದ ಒಟ್ಟು 12 ನದಿಗಳು ಮುಂದೊಂದು ದಿನ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಅಪಾಯದಲ್ಲಿವೆ.

ಉಷ್ಣ ಹವೆಯ ಪರಿಣಾಮ, ಆಂಧ್ರ, ಮಹಾರಾಷ್ಟ್ರ, ಗುಜರಾತ್‌ಗಳಲ್ಲಿನ ಹಲವಾರು ಚಿಕ್ಕ ಅಣೆಕಟ್ಟುಗಳು ಈಗಾಗಲೇ ಬರಿದಾಗಿವೆ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ನದಿಗಳಲ್ಲಿ ಕಡಿಮೆಯಾಗಿರುವ ನೀರಿನ ಪ್ರಮಾಣ ಸಾಧಾರಣ ಮಟ್ಟದ್ದಾಗಿದ್ದಾಗಿದ್ದರೂ, ಪರಿಸ್ಥಿತಿ ಹೀಗೇ ಮುಂದುವರಿದರೆ, ಈ ನದಿಗಳು ಮಾಯವಾಗುವ ಅಪಾಯ ಇಲ್ಲದಿಲ್ಲ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.

ಹವಾಮಾನ ಇಲಾಖೆಯಿಂದಲೂ ಎಚ್ಚರ: ಈ ವರ್ಷ, ಮಾರ್ಚ್‌ನಿಂದ ಏಪ್ರಿಲ್‌ವರೆಗೆ ಬರಬೇಕಿದ್ದ ಮುಂಗಾರು ಪೂರ್ವ ಮಳೆಯ ಪ್ರಮಾಣದಲ್ಲಿ ಶೇ. 27ರಷ್ಟು ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ತಿಳಿಸಿದ್ದು, ದೇಶದ ಅರ್ಧಕ್ಕೂ ಹೆಚ್ಚು ಭಾಗ ಬರಗಾಲಕ್ಕೆ ತುತ್ತಾಗಿದೆ ಎಂದು ಹೇಳಿದೆ. ಜತೆಗೆ, 2019ರ ವರ್ಷವು ಎಲ್‌ ನಿನೋ ಇಯರ್‌ (ಹೆಚ್ಚು ಉಷ್ಣಾಂಶ-ಕಡಿಮೆ ಜಲ ವರ್ಷ) ಎಂದು ಪರಿಗಣಿಸಲ್ಪಟ್ಟಿದೆ ಎಂದು ಇಲಾಖೆ ತಿಳಿಸಿದೆ.

ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿರುವ ಗಾಂಧಿನಗರದ ಐಐಟಿಯ ಸಹ ಪ್ರಾಧ್ಯಾಪಕರಾಗಿರುವ ವಿಮಲ್‌ ಶರ್ಮಾ, ಈಗಾಗಲೇ ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗುಜರಾತ್‌, ಜಾರ್ಖಂಡ್‌, ಮಹಾರಾಷ್ಟ್ರ, ಈಶಾನ್ಯ ರಾಜಸ್ಥಾನ, ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಅತಿ ಉಷ್ಣ ಹವೆ ಬೀಸುತ್ತಿದೆ. ಇದರ ಪರಿಣಾಮ ಈ ಭಾಗದ ಜನರು ಈ ವರ್ಷದ ಬರಗಾಲದ ಬೇಗೆ ಅನುಭವಿಸಬೇಕಿದೆ ಎಂದಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Covid-19-1

ಧಾರವಾಡ: 176 ಪಾಸಿಟಿವ್ ಪ್ರಕರಣಗಳು ಪತ್ತೆ ; ಒಟ್ಟು 1574ಕ್ಕೇರಿದ ಪ್ರಕರಣಗಳ ಸಂಖ್ಯೆ

ಇನ್ನೆರಡು ದಿನಗಳಲ್ಲಿ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್‌ ದಿನಾಂಕ ಘೋಷಣೆ

ಇನ್ನೆರಡು ದಿನಗಳಲ್ಲಿ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್‌ ದಿನಾಂಕ ಘೋಷಣೆ

ಇನ್ನೂ 6-7 ತಿಂಗಳು ಕೋವಿಡ್ ಬಾಧಿಸಲಿದೆ

ಇನ್ನೂ 6-7 ತಿಂಗಳು ಕೋವಿಡ್ ಬಾಧಿಸಲಿದೆ : ಸಚಿವ ಆರ್‌.ಅಶೋಕ್

ತಾಯಿ ಸಾವಿನ ನೋವಲ್ಲೇ ಕೋವಿಡ್ ಸೋಂಕಿತೆಗೆ ಹೆರಿಗೆ

ತಾಯಿ ಸಾವಿನ ನೋವಲ್ಲೇ ಕೋವಿಡ್ ಸೋಂಕಿತೆಗೆ ಹೆರಿಗೆ

GKVK ಕೋವಿಡ್‌ ಆರೈಕೆ ಕೇಂದ್ರದಲ್ಲಿ ಅವ್ಯವಸ್ಥೆ: ಅಧಿಕಾರಿಗಳ ಬೆವರಿಳಿಸಿದ ಡಿಸಿಎಂ

GKVK ಕೋವಿಡ್‌ ಆರೈಕೆ ಕೇಂದ್ರದಲ್ಲಿ ಅವ್ಯವಸ್ಥೆ: ಅಧಿಕಾರಿಗಳ ಬೆವರಿಳಿಸಿದ ಡಿಸಿಎಂ

ಝೂಮ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳ ಕೀಟಲೆ ; ಕಣ್ಣೀರು ಹಾಕಿದ 55 ವರ್ಷದ ಲೆಕ್ಚರರ್

ಝೂಮ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳ ಕೀಟಲೆ ; ಕಣ್ಣೀರು ಹಾಕಿದ 55 ವರ್ಷದ ಲೆಕ್ಚರರ್

ಕೋವಿಡ್ ಸಂದರ್ಭ ಕೆಲಸ ಮಾಡಿದ ಬಿಎಂಟಿಸಿ ನೌಕರರಿಗೆ ಬಂಪರ್ ಗಿಫ್ಟ್

ಕೋವಿಡ್ ಸಂದರ್ಭ ಕೆಲಸ ಮಾಡಿದ 3397 ಮಂದಿ ಬಿಎಂಟಿಸಿ ನೌಕರರಿಗೆ ಬಂಪರ್ ಗಿಫ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಝೂಮ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳ ಕೀಟಲೆ ; ಕಣ್ಣೀರು ಹಾಕಿದ 55 ವರ್ಷದ ಲೆಕ್ಚರರ್

ಝೂಮ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳ ಕೀಟಲೆ ; ಕಣ್ಣೀರು ಹಾಕಿದ 55 ವರ್ಷದ ಲೆಕ್ಚರರ್

264 ಕೋಟಿ ರೂ. ವೆಚ್ಚ, 8 ವರ್ಷದಲ್ಲಿ ನಿರ್ಮಾಣಗೊಂಡ ಸೇತುವೆ 29 ದಿನದಲ್ಲೇ ಕೊಚ್ಚಿ ಹೋಯ್ತು

264 ಕೋಟಿ ರೂ. ವೆಚ್ಚ, 8 ವರ್ಷದಲ್ಲಿ ನಿರ್ಮಾಣಗೊಂಡ ಸೇತುವೆ 29 ದಿನದಲ್ಲೇ ಕೊಚ್ಚಿ ಹೋಯ್ತು!

ಮುಂಬೈ ಭಾರೀ ಮಳೆಗೆ ಮಲಾಡ್ ನಲ್ಲಿ ಕುಸಿದು ಬಿದ್ದ ಎರಡು ಅಂತಸ್ತಿನ ಕಟ್ಟಡ, ಓರ್ವ ಸಾವು

ಮುಂಬೈ ಭಾರೀ ಮಳೆ: ಮಲಾಡ್ ನಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದು ಮೂವರು ಸಾವು

ತಿರುಪತಿ ತಿರುಮಲ ದೇವಾಲಯದ 15 ಪುರೋಹಿತರಿಗೆ, 91 ಉದ್ಯೋಗಿಗಳಿಗೆ ಕೋವಿಡ್ 19 ದೃಢ

ತಿರುಪತಿ ತಿರುಮಲ ದೇವಾಲಯದ 15 ಪುರೋಹಿತರಿಗೆ, 91 ಉದ್ಯೋಗಿಗಳಿಗೆ ಕೋವಿಡ್ 19 ದೃಢ

ಪ್ಯಾಂಗಾಂಗ್ ನಿಂದ ಸೇನೆ ಹಿಂಪಡೆಯಲ್ಲ ಎಂದ ಚೀನಾ: ಗಡಿಯಲ್ಲಿ ಮತ್ತೆ ಭಾರತದ ಸೇನೆ ಜಮಾವಣೆ

ಪ್ಯಾಂಗಾಂಗ್ ನಿಂದ ಸೇನೆ ಹಿಂಪಡೆಯಲ್ಲ ಎಂದ ಚೀನಾ: ಗಡಿಯಲ್ಲಿ ಮತ್ತೆ ಭಾರತದ ಸೇನೆ ಜಮಾವಣೆ

MUST WATCH

udayavani youtube

Rajasthan: ಬಿಕ್ಕಟ್ಟಿಗೆ ಕಾರಣ Sachin Pilot ಅಲ್ಲ,Gehlot?!| Udayavani Straight Talk

udayavani youtube

COVID-19 ಸಮಯದಲ್ಲಿ ಪುಟಾಣಿಗಳಿಗೆ Video ಪಾಠ ಮಾಡಿ Famous ಆದ ಶಿಕ್ಷಕಿ Vandana Rai

udayavani youtube

ಮರದ ಮೇಲೆಯೇ ಪ್ರಜ್ಞೆ ತಪ್ಪಿದ ಮೂರ್ತೆದಾರ – ಆ ಎರಡು ಗಂಟೆಗಳು!

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

ಹೊಸ ಸೇರ್ಪಡೆ

Covid-19-1

ಧಾರವಾಡ: 176 ಪಾಸಿಟಿವ್ ಪ್ರಕರಣಗಳು ಪತ್ತೆ ; ಒಟ್ಟು 1574ಕ್ಕೇರಿದ ಪ್ರಕರಣಗಳ ಸಂಖ್ಯೆ

ಇನ್ನೆರಡು ದಿನಗಳಲ್ಲಿ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್‌ ದಿನಾಂಕ ಘೋಷಣೆ

ಇನ್ನೆರಡು ದಿನಗಳಲ್ಲಿ ಪಿಯುಸಿ ಉಪನ್ಯಾಸಕರ ಕೌನ್ಸೆಲಿಂಗ್‌ ದಿನಾಂಕ ಘೋಷಣೆ

ಇನ್ನೂ 6-7 ತಿಂಗಳು ಕೋವಿಡ್ ಬಾಧಿಸಲಿದೆ

ಇನ್ನೂ 6-7 ತಿಂಗಳು ಕೋವಿಡ್ ಬಾಧಿಸಲಿದೆ : ಸಚಿವ ಆರ್‌.ಅಶೋಕ್

ತಾಯಿ ಸಾವಿನ ನೋವಲ್ಲೇ ಕೋವಿಡ್ ಸೋಂಕಿತೆಗೆ ಹೆರಿಗೆ

ತಾಯಿ ಸಾವಿನ ನೋವಲ್ಲೇ ಕೋವಿಡ್ ಸೋಂಕಿತೆಗೆ ಹೆರಿಗೆ

ಸುಳ್ಯ : ಜುಲೈ 14 ರಂದು ಮೃತಪಟ್ಟ ವ್ಯಕ್ತಿಯಲ್ಲೂ ಕೋವಿಡ್ ಸೋಂಕು ದೃಢ!

ಸುಳ್ಯ : ಜುಲೈ 14ರಂದು ಮೃತಪಟ್ಟ ವ್ಯಕ್ತಿಗೆ ಕೋವಿಡ್ ಸೋಂಕು ದೃಢ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.