ಭಾರತೀಯ Facebook ಬಳಕೆದಾರರ ಡಾಟಾಕ್ಕೆ ಕನ್ನ: ಕೇಂಬ್ರಿಡ್ಜ್ ಅನಾಲಿಟಿಕಾ ವಿರುದ್ಧ CBI ಕೇಸ್
ಭಾರತದಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರಲು ದತ್ತಾಂಶವನ್ನು ಬಳಕೆ ಆರೋಪ
Team Udayavani, Jan 22, 2021, 12:41 PM IST
ನವದೆಹಲಿ: ಕಾನೂನು ಬಾಹಿರವಾಗಿ 5.62 ಲಕ್ಷ ಮಂದಿ ಭಾರತೀಯ ಫೇಸ್ ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಕದ್ದ ಲಂಡನ್ ಮೂಲದ ಇಂಗ್ಲೆಂಡ್ ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆಯಾದ ಕೇಂಬ್ರಿಡ್ಜ್ ಅನಾಲಿಟಿಕಾದ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ಈ ಪ್ರಕರಣದಲ್ಲಿ ಸಿಬಿಐ ಗ್ಲೋಬಲ್ ಸೈನ್ಸ್ ರಿಸರ್ಚ್ (ಜಿಎಸ್ ಆರ್ ಎಲ್) ಎಂಬ ಮತ್ತೊಂದು ಕಂಪನಿಯ ಹೆಸರನ್ನು ಕೂಡಾ ಸೇರಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಹುಣಸೋಡಿ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಬಳಕೆದಾರರ ಅನುಮತಿ ಇಲ್ಲದೆ ಕೇಂಬ್ರಿಡ್ಜ್ ಅನಾಲಿಟಿಕಾ ಜಗತ್ತಿನಾದ್ಯಂತ ಸುಮಾರು 50 ಲಕ್ಷಕ್ಕಿಂತಲೂ ಅಧಿಕ ಖಾತೆದಾರರ ಖಾಸಗಿ ಮಾಹಿತಿಯನ್ನು ಕದ್ದಿರುವುದಾಗಿ 2018ರಲ್ಲಿ ವರದಿಯಾಗಿತ್ತು.
ಫೇಸ್ ಬುಕ್ ಡಾಟಾ ಕಳ್ಳತನ ಮಾಡಿದ ಕೇಂಬ್ರಿಡ್ಜ್ ಅನಾಲಿಟಿಕಾದ ವಿರುದ್ಧ ಸಿಬಿಐ ತನಿಖೆ ನಡೆಸುವುದಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಅವರು 2018ರ ಜುಲೈನಲ್ಲಿ ಲೋಕಸಭೆಗೆ ಮಾಹಿತಿ ನೀಡಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಮತ್ತು ಜಿಎಸ್ ಆರ್ ಎಲ್ ಸಂಸ್ಥೆ ಕ್ರಿಮಿನಲ್ ಸಂಚು ಮತ್ತು ಸೈಬರ್ ಅಪರಾಧ ನಡೆಸಿರುವುದು ಬಯಲಾಗಿತ್ತು ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು
ಸಿಬಿಐ ತನಿಖೆಯಲ್ಲಿ ಜಿಎಸ್ ಆರ್ ಎಲ್ ಕಾನೂನು ಬಾಹಿರವಾಗಿ ಭಾರತದ ಸುಮಾರು 5.62 ಲಕ್ಷ ಫೇಸ್ ಬುಕ್ ಬಳಕೆದಾರರ ಖಾಸಗಿ ದತ್ತಾಂಶವನ್ನು ಸಂಗ್ರಹಿಸಿ, ಅದನ್ನು ಕೇಂಬ್ರಿಡ್ಜ್ ಅನಾಲಿಟಿಕಾ ಜತೆ ಹಂಚಿಕೊಂಡಿರುವುದಾಗಿ ಫೇಸ್ ಬುಕ್ ತಿಳಿಸಿತ್ತು. ಭಾರತದಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರಲು ದತ್ತಾಂಶವನ್ನು ಬಳಸಿಕೊಂಡಿರುವುದಾಗಿ ಸಂಸ್ಥೆ ಮೇಲೆ ಆರೋಪಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ