ಕೋಲ್ಕತ ಮಾಜಿ ಪೊಲೀಸ್‌ ಆಯುಕ್ತರ ವಿರುದ್ದ ಬುಧವಾರ ಸಾಕ್ಷ್ಯ ಮಂಡನೆ: ಸುಪ್ರೀಂಗೆ ಸಿಬಿಐ

Team Udayavani, Apr 30, 2019, 12:21 PM IST

ಹೊಸದಿಲ್ಲಿ : ಬಹುಕೋಟಿ ವಂಚನೆಯ ಶಾರದಾ ಚಿಟ್‌ ಫ‌ಂಡ್‌ ಹಗರಣಕ್ಕೆ ಸಂಬಂಧಪಟ್ಟು ಕೋಲ್ಕತ ಮಾಜಿ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರ ಕಸ್ಟಡಿ ತನಿಖೆಗೆ ಅವಕಾಶ ಕಲ್ಪಿಸಬೇಕೆಂದು ಸಿಬಿಐ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿದೆ.

ಸಿಬಿಐ ಮನವಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್‌, ರಾಜೀವ್‌ ಕುಮಾರ್‌ ಅವರ ಕಸ್ಟಡಿ ತನಿಖೆಗೆ ಮೊದಲು ಆತನ ವಿರುದ್ಧದ ಸಾಕ್ಷ್ಯಗಳನ್ನು ಕೋರ್ಟಿನ ಮುಂದೆ ಮಂಡಿಸುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತು.

ರಾಜೀವ್‌ ಕುಮಾರ್‌ ಅವರ ಕಸ್ಟಡಿ ತನಿಖೆಯ ಕೋರಿಕೆಯಲ್ಲಿ ನ್ಯಾಯದ ಹಿತಾಸಕ್ತಿ ಇದೆಯೇ ಮತ್ತು ಆ ಕೋರಿಕೆಯು ಸಾಚಾ ಆಗಿದೆಯೇ ಎಂಬುದನ್ನು ನಾವು ಖಾತರಿ ಪಡಿಸಿಕೊಳ್ಳಬೇಕಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತು.

ಇದಕ್ಕೆ ಉತ್ತರವಾಗಿ ಸಿಬಿಐ, ತಾನು ನಾಳೆ ಬುಧವಾರ ರಾಜೀವ್‌ ಕುಮಾರ್‌ ವಿರುದ್ಧದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಹೇಳಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ