ಸಿಬಿಎಸ್‌ಇಯಲ್ಲೂ ಹೆಣ್ಣುಮಕ್ಕಳೇ ಸ್ಟ್ರಾಂಗು

Team Udayavani, May 27, 2018, 6:00 AM IST

6.jpg

ಹೊಸದಿಲ್ಲಿ: ವಿವಾದಗಳ ಮಧ್ಯೆಯೂ ಮುಗಿದಿದ್ದ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯ ಫ‌ಲಿತಾಂಶ ಶನಿವಾರ ಪ್ರಕಟವಾಗಿದ್ದು, ನೋಯ್ಡಾ ಶಾಲೆಯ ಕಲಾ ವಿಭಾಗದ ಮೇಘನಾ ಶ್ರೀವಾಸ್ತವ ಪ್ರಥಮ ಸ್ಥಾನ ಗಳಿಸಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳ ಸರಾಸರಿ ಶೇಕಡಾವಾರು 83.01 ಆಗಿದ್ದು, ಕಳೆದ ವರ್ಷ ಶೇ. 82.02 ಆಗಿತ್ತು. ಇತರ ಪರೀ ಕ್ಷೆ ಗಳಂತೆಯೇ ಸಿಬಿಎಸ್‌ಇ 12ನೇ ತರಗ ತಿಯ ಪರೀಕ್ಷೆಯಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿದ್ಯಾರ್ಥಿನಿಯರ ಪಾಸ್‌ ಪರ್ಸಂಟೇಜ್‌ 88.31 ಆಗಿದ್ದು, ವಿದ್ಯಾರ್ಥಿಗಳದ್ದು ಶೇ.78.99 ಆಗಿದೆ.

ಮೇಘನಾ ಶೇ. 99.8 ಗಳಿಸಿದ್ದು, 500 ಅಂಕಗಳಲ್ಲಿ 499 ಅಂಕ ಪಡೆದಿದ್ದಾರೆ. ನೋಯ್ಡಾದ ಸ್ಟೆಪ್‌ ಬೈ ಸ್ಟೆಪ್‌ ಶಾಲೆಯ ವಿದ್ಯಾರ್ಥಿನಿ ಈಕೆ. ಇಂಗ್ಲಿಷ್‌ನಲ್ಲಿ 99 ಪಡೆದಿರುವ ಈಕೆ, ಉಳಿದ ಎಲ್ಲ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾಳೆ. ಎರಡನೇ ಸ್ಥಾನವೂ ಕಲಾ ವಿಭಾಗದ ಅನುಷ್ಕಾ ಚಾಂದ್‌ ಪಾಲಾಗಿದ್ದು, ಈಕೆ ಗಾಜಿಯಾಬಾದ್‌ ಶಾಲೆಯ ವಿದ್ಯಾ ರ್ಥಿನಿ. ಈಕೆ 500 ಕ್ಕೆ 498 ಅಂಕ ಪಡೆದಿದ್ದಾಳೆ. ಮೂರನೇ ಸ್ಥಾನವನ್ನು ಏಳು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಇವರು 500ಕ್ಕೆ 497 ಅಂಕ ಪಡೆದಿದ್ದಾರೆ.

ತಿರುವನಂತಪುರಂ ಪ್ರದೇಶ ಅತ್ಯುತ್ತಮ ಸಾಧನೆ ಮಾಡಿದ್ದು, ಪಾಸ್‌ ಪರ್ಸಂಟೇಜ್‌ ಶೇ. 97.32 ಆಗಿದೆ. ಚೆನ್ನೈ ವಲಯ ಎರಡನೇ ಸ್ಥಾನದಲ್ಲಿದ್ದು, ಪಾಸ್‌ ಪರ್ಸಂಟೇಜ್‌ ಶೇ. 93.87 ಆಗಿದೆ. ಶೇ. 89 ಪಾಸ್‌ ಪರ್ಸಂಟೇಜ್‌ ಹೊಂದಿರುವ ದೆಹಲಿ ಮೂರನೇ ಸ್ಥಾನದಲ್ಲಿದೆ. ಪರೀಕ್ಷೆಯಲ್ಲಿ ಪಾಸಾದ ಎಲ್ಲರಿಗೂ ಅಭಿನಂದನೆಗಳು. ಪಾಸಾಗದವ ರಿಗೆ ನನ್ನ ಶುಭಕಾಮನೆಗಳು. ಅವರು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಈ ಹಿನ್ನಡೆ ತಾತ್ಕಾಲಿಕ ಎಂದು ಸಚಿವ ಜಾವಡೇಕರ್‌ ಹೇಳಿದ್ದಾರೆ.

ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಯ ಮಗಳೇ ಟಾಪರ್‌
ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಶಬೀರ್‌ ಶಾ ಪುತ್ರಿ ಸಮಾ ಶಬೀರ್‌ ಸಿಬಿಎಸ್‌ಇ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಟಾಪರ್‌ ಆಗಿ ಹೊರಹೊಮ್ಮಿದ್ದಾಳೆ. ಇಲ್ಲಿನ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿನಿಯಾಗಿ ರುವ ಸಮಾ ಶೇ.97.8 ಅಂಕಗಳನ್ನು ಪಡೆದಿದ್ದಾಳೆ. ಈಕೆಯ ತಂದೆ, ಜಮ್ಮು ಕಾಶ್ಮೀರ ಡೆಮಾಕ್ರಾಟಿಕ್‌ ಫ್ರೀಡಂ ಪಾರ್ಟಿ ಮುಖ್ಯಸ್ಥ ಶಬೀರ್‌ ಶಾ ಸದ್ಯ ತಿಹಾರ್‌ ಜೈಲಿನಲ್ಲಿದ್ದಾನೆ. ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಉಗ್ರರಿಗೆ ಹಣಕಾಸು ನೆರವು ಒದಗಿಸಿದ ಆರೋಪದಲ್ಲಿ ಈತನನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.

ಟಾಪ್ ನ್ಯೂಸ್

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ:  ಹೆಚ್ ಡಿಕೆ ಸ್ಪಷ್ಟನೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ: ಹೆಚ್ ಡಿಕೆ ಸ್ಪಷ್ಟನೆ

rAmbhat

ಸಕಲ ಸರಕಾರಿ ಗೌರವಗಳೊಂದಿಗೆ ರಾಮ ಭಟ್ಟರ ಅಂತಿಮ ಯಾತ್ರೆ

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

death of soldeir

ನಿಂತಿದ್ದ ಕಾರಲ್ಲಿ ಮಾಜಿ ಸೈನಿಕ ಶವಪತ್ತೆ!

ಬೆಳಗಾವಿಗೆ ಆಗಮಿಸಿದ ಸಿಎಂ ಬೊಮ್ಮಾಯಿ

ಬೆಳಗಾವಿಗೆ ಆಗಮಿಸಿದ ಸಿಎಂ ಬೊಮ್ಮಾಯಿ

Untitled-1

ಸಿದ್ದರಾಮಯ್ಯ – ಜಿ.ಟಿ ದೇವೇಗೌಡ ದೋಸ್ತಿ ಹಾಸ್ಯಾಸ್ಪದ: ಸಂಸದ ವಿ. ಶ್ರೀನಿವಾಸಪ್ರಸಾದ್

mantri mall

ಆಸ್ತಿ ತೆರಿಗೆ ಬಾಕಿ: ಮಂತ್ರಿಮಾಲ್‌ಗೆ ಬೀಗ..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

ಒಮಿಕ್ರಾನ್ ಹೆಚ್ಚಳದ ಆತಂಕ; ಭಾರತದಲ್ಲಿ ಫೆಬ್ರುವರಿಯಲ್ಲಿ 3ನೇ ಅಲೆ ಸಾಧ್ಯತೆ: ಐಐಟಿ ವಿಜ್ಞಾನಿ

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆ

ಒಂದೇ ದಿನದಲ್ಲಿ ದಾಖಲೆ ಪ್ರಮಾಣದ ಇಳಿಕೆ; ಭಾರತದಲ್ಲಿ 6,822 ಕೋವಿಡ್ ಸೋಂಕು ಪ್ರಕರಣ ಪತ್ತೆ

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!

ನಾನ್‌ ಬೆಡ್‌ಶೀಟ್‌, ತಲೆದಿಂಬು! ಗಮನ ಸೆಳೆದ ಟಿವಿ ನಿರೂಪಕಿ ಪದ್ಮಾ ಲಕ್ಷ್ಮಿ ಬೆಡ್‌ರೂಂ!

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ

MUST WATCH

udayavani youtube

ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ಪುನೀತ್ ರಾಜ್ ಕುಮಾರ್ ಕನಸಿನ ‘ಗಂಧದಗುಡಿ’ ಟೀಸರ್ ಬಿಡುಗಡೆ

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

ಹೊಸ ಸೇರ್ಪಡೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ:  ಹೆಚ್ ಡಿಕೆ ಸ್ಪಷ್ಟನೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ: ಹೆಚ್ ಡಿಕೆ ಸ್ಪಷ್ಟನೆ

19protection

ಬೇಡಿಕೆ ಈಡೇರಿಕೆಗೆ ಗುತ್ತಿಗೆದಾರರ ಆಗ್ರಹ

18election

ಪ್ರಥಮ ಪ್ರಾಶಸ್ತ್ಯದ ಮತ ನೀಡಲು ಮಲ್ಲಿಕಾರ್ಜುನ ಲೋಣಿ ಮನವಿ

rAmbhat

ಸಕಲ ಸರಕಾರಿ ಗೌರವಗಳೊಂದಿಗೆ ರಾಮ ಭಟ್ಟರ ಅಂತಿಮ ಯಾತ್ರೆ

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.