ಚಿಲ್ಲರೆ ವ್ಯಾಪಾರಿಗಳಿಗೆ ಕೇಂದ್ರದಿಂದ ಪರಿಹಾರ ಪ್ಯಾಕೇಜ್?
Team Udayavani, May 9, 2020, 10:39 PM IST
ಹೊಸದಿಲ್ಲಿ: ಸಣ್ಣ ಚಿಲ್ಲರೆ ವ್ಯಾಪಾರಿಗಳಿಗೆ ಪರಿಹಾರ ಪ್ಯಾಕೇಜ್ ನೀಡಲು ಕೇಂದ್ರ ಸರಕಾರ ಚಿಂತಿಸುತ್ತಿದೆ.
7 ಕೋಟಿಗೂ ಅಧಿಕ ಸಣ್ಣ ವ್ಯಾಪಾರಿಗಳನ್ನು ಪ್ರತಿನಿಧಿಸುವ ಸಿಎಐಟಿ ಕೆಲವು ದಿನಗಳ ಹಿಂದೆ ಕೇಂದ್ರ ಸರಕಾರದ ಮುಂದೆ ಪ್ರಮುಖ ಬೇಡಿಕೆಗಳನ್ನು ಇಟ್ಟಿತ್ತು.
ವಿಶೇಷ ಬಡ್ಡಿದರದಲ್ಲಿ ಬ್ಯಾಂಕ್ ಸಾಲ, ವ್ಯಾಪಾರಿ ಮತ್ತು ಉದ್ಯೋಗಿಗಳಿಗೆ ಸರಕಾರಿ ಬೆಂಬಲಿತ ವಿಮೆ, ವೇತನಾ ಸಂರಕ್ಷಣಾ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿತ್ತು. ವ್ಯಾಪಾರಿಗಳ ಸಮಸ್ಯೆ ಅವಲೋಕಿಸಿ ಕೇಂದ್ರ ಸರಕಾರ ಅಗತ್ಯ ಪ್ಯಾಕೇಜ್ ರೂಪಿಸಲು ಸಜ್ಜಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ‘ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಕಳೆದ ವರ್ಷ ಜಾರಿಮಾಡಿದ್ದ ಸಣ್ಣ ವ್ಯಾಪಾರಿಗಳ ಪಿಂಚಣಿ ಯೋಜನೆಯನ್ನೂ ಸರಕಾರ ಪರಿಷ್ಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 1.5 ಕೋಟಿ ರೂ.ಗಿಂತ ಕಡಿಮೆ ಆದಾಯವುಳ್ಳ ಸಣ್ಣ ಚಿಲ್ಲರೆ ವ್ಯಾಪಾರಿಗಳು, 60 ವರ್ಷ ದಾಟಿದ ಅನಂತರ 3000 ರೂ. ಪಿಂಚಣಿ ಪಡೆಯುವ ಈ ಯೋಜನೆ ಪರಿಷ್ಕರಣೆಗೊಳ್ಳುವ ಸಂಭವವಿದೆ.