ವೈದ್ಯಕೀಯ ಪರೀಕ್ಷಾ ಶುಲ್ಕಕ್ಕೆ ಕೇಂದ್ರ ಬ್ರೇಕ್?
Team Udayavani, May 20, 2018, 8:32 AM IST
ಹೊಸದಿಲ್ಲಿ: ಅಗತ್ಯ ಔಷಧಗಳ ದರಗಳ ಮೇಲೆ ನಿಯಂತ್ರಣ ಹೇರಿರುವ ಕೇಂದ್ರ ಸರ್ಕಾರ ಮತ್ತೂಂದು ಕ್ರಮ ಕೈಗೊಳ್ಳಲು ಮುಂದಾಗಿದೆ. ದೇಶದಲ್ಲಿನ ಪ್ರಯೋಗಾಲಯಗಳಲ್ಲಿ ಅಗತ್ಯವಾಗಿರುವ ವೈದ್ಯಕೀಯ ಪರೀಕ್ಷೆಗಳ ಮೇಲಿನ ಶುಲ್ಕಕ್ಕೆ ಮಿತಿ ಹೇರುವ ನಿಯಮ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಬಗ್ಗೆ “ಮನಿಕಂಟ್ರೋಲ್.ಕಾಂ’ ವರದಿ ಮಾಡಿದ್ದು, ನೀತಿ ಆಯೋಗದ ಜತೆಗೆ ಈ ಕುರಿತು ಸಮಗ್ರವಾಗಿ ಚರ್ಚೆ ನಡೆಸಿದ ಬಳಿಕ ಅದನ್ನು ಜಾರಿ ಮಾಡುವ ಇರಾದೆ ಹೊಂದಿದೆ.
ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿರುವ 113 ವೈದ್ಯಕೀಯ ಪರೀಕ್ಷೆಗಳ ಪೈಕಿ 58ನ್ನು ಸಾಮಾನ್ಯವಾಗಿ ವೈದ್ಯರು ಸೂಚಿಸುವ ಪಟ್ಟಿ ಎಂದು ಪರಿಗಣಿಸಲಾಗಿದೆ. ಅದಕ್ಕೆ ಪ್ರಯೋಗಾಲಯಗಳು ಮಿತಿಗಿಂತ ಹೆಚ್ಚು ಶುಲ್ಕ ವಿಧಿಸದಂತೆ ಮಾಡುವ ಪ್ರಸ್ತಾಪ ಇದಾಗಿದೆ. ಇತರ 55 ಗಂಭೀರ ಕಾಯಿಲೆಗಳನ್ನು ಗುರುತಿಸುವ ತಪಾಸಣೆಯಾಗಿರುತ್ತದೆ. ಸರ್ಕಾರದ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿರುವ ಡಾ.ಲಾಲ್ ಪ್ಯಾತ್ ಲಾಬ್ಸ್ನ ಸಿಇಒ ಓಮ್ ಮನ್‌ಚಂದ, “ನಿಯಮ ಜಾರಿಗೆ ಮುನ್ನ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು