ಮೆಹಬೂಬ ಕೋರಿಕೆ ಮೇರೆಗೆ ಸಿಎಸ್ ಸೇವೆ 1 ವರ್ಷ ವಿಸ್ತರಿಸಿದ ಕೇಂದ್ರ
Team Udayavani, May 19, 2018, 12:03 PM IST
ಹೊಸದಿಲ್ಲಿ : ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಕೋರಿಕೆಯ ಮೇರೆಗೆ ಕೇಂದ್ರ ಸರಕಾರ ಜಮ್ಮು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿ ಬಿ ವ್ಯಾಸ್ ಅವರ ಸೇವೆಯನ್ನು ಇನ್ನೂ ಒಂದು ವರ್ಷ ಮಟ್ಟಿಗೆ ವಿಸ್ತರಿಸಿದೆ. 2018ರ ಮೇ 31ರಂದು ವ್ಯಾಸ್ ಅವರ ಸೇವೆ ಕೊನೆಗೊಳ್ಳುವುದಿತ್ತು.
ಕೇಂದ್ರ ಸಿಬಂದಿ ಸಚಿವಾಲಯ ಜಮ್ಮು ಕಾಶ್ಮೀರ ಮುಖ್ಯಮಂತ್ರಿಗಳ ಕೋರಿಕೆಯನ್ನು ಮನ್ನಿಸಿ ಮಂಜೂರು ಮಾಡಿರುವ ವಿಸ್ತರಣೆ ಪ್ರಕಾರ ಮುಖ್ಯ ಕಾರ್ಯದರ್ಶಿ ಬಿ ಬಿ ವ್ಯಾಸ್ ಅವರು 2018ರ ಜೂನ್ 1ರಿಂದ 2019ರ ಮೇ31ರ ವರೆಗೆ ಸೇವೆಯಲ್ಲಿರುತ್ತಾರೆ.
ಮುಖ್ಯ ಕಾರ್ಯದರ್ಶಿಗಳ ಸೇವಾವಧಿಯನ್ನು ದೀರ್ಘಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಂಬಂಧಿತ ನಿಯಮಗಳಿಗೆ ತಿದ್ದುಪಡಿ ಮಾಡಿದ ಕೆಲವೇ ದಿನಗಳ ಬಳಿಕ ಈ ನಡೆ ಕಂಡು ಬಂದಿದೆ. ಈ ಹೊಸ ನಿಯಮ ಊರ್ಜಿತಕ್ಕೆ ಬರುವ ಮುನ್ನವೇ ಜಮ್ಮು ಕಾಶ್ಮೀರ ಮುಖ್ಯ ಕಾರ್ಯದರ್ಶಿ ವ್ಯಾಸ್ 60ರ ವಯಸ್ಸನ್ನು ತಲುಪಿದ್ದಾರೆ.
ಮುಖ್ಯ ಕಾರ್ಯದರ್ಶಿಗಳ ನಿವೃತ್ತಿ ವಯಸು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿದೆ ಎನ್ನುವುದು ಇಲ್ಲಿ ಉಲ್ಲೇಖನೀಯ.