ತಂಬಾಕು ಪ್ಯಾಕಲ್ಲಿ ಸಹಾಯವಾಣಿ ಸಂಖ್ಯೆ
Team Udayavani, Dec 4, 2017, 10:55 AM IST
ಹೊಸದಿಲ್ಲಿ: ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಹೆಚ್ಚುವರಿ ಚಿತ್ರ ಮತ್ತು ಸಂದೇಶಗಳನ್ನು ಮುದ್ರಿಸುವುದಕ್ಕಾಗಿ ಆದೇಶ ಹೊರಡಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು, ಧೂಮಪಾನ ತಡೆಗೆ ಸಂಬಂಧಿಸಿ ಸಹಾಯವಾಣಿ ಸಂಖ್ಯೆ ಕೂಡ ನಮೂದಿ ಸುವಂತೆ ಸೂಚಿಸಲು ನಿರ್ಧರಿಸಲಾಗಿದೆ. ಈಗಾಗಲೇ ರಾಷ್ಟ್ರೀಯ ತಂಬಾಕು ಸೇವನೆ ವಜ್ಯ ಸಹಾಯವಾಣಿ 1800 227787 ಅನ್ನು ನಿಗದಿಸಲಾಗಿದ್ದು, ಇದನ್ನು ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಮುದ್ರಿಸುವಂತೆ ಸೂಚಿಸಲಾಗುತ್ತದೆ. ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಚಟದಿಂದ ಮುಕ್ತರಾಗಲು ಉಚಿತ ಬೆಂಬಲ ಮತ್ತು ಮಾರ್ಗದರ್ಶನ ಪಡೆಯಬಹುದಾಗಿರುತ್ತದೆ.
2016ರಲ್ಲಿ ಹೊಸ ನಿಯಮಾವಳಿ ರೂಪಿಸಿದ್ದ ಆರೋಗ್ಯ ಸಚಿವಾಲಯವು ಆರೋಗ್ಯದ ಅಪಾಯದ ಬಗ್ಗೆ ಎಚ್ಚರಿಕೆಯನ್ನು ಪ್ಯಾಕ್ನ ಮೇಲೆ ಶೇ.85ರಷ್ಟು ಭಾಗದಲ್ಲಿ ನಮೂದಿಸುವುದು ಕಡ್ಡಾಯಗೊಳಿಸಿತ್ತು. ಇದೀಗ ಸಚಿವಾಲಯವು ಮತ್ತೂಂದು ಸುತ್ತಿನ ಮರುಪರಿಶೀಲನೆ ನಡೆಸಿದ್ದು, ಹೆಚ್ಚುವರಿ ಚಿತ್ರ ಮತ್ತು ಸಂದೇಶಗಳನ್ನು ಪ್ರಕಟಿಸಬಹುದಾದ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ