ಟಿಎಂಸಿ ಅಭ್ಯರ್ಥಿ ಪರ ಬಾಂಗ್ಲಾ ನಟನಿಂದ ಚುನಾವಣಾ ಪ್ರಚಾರ: ವರದಿ ಕೇಳಿದ ಕೇಂದ್ರ
Team Udayavani, Apr 16, 2019, 4:16 PM IST
ಹೊಸದಿಲ್ಲಿ : ಬಾಂಗ್ಲಾದೇಶೀ ನಟ ಫರ್‌ದೂಸ್ ಅಹ್ಮದ್ ಅವರು ತೃಣ ಮೂಲ ಕಾಂಗ್ರೆಸ್ ಅಭ್ಯರ್ಥಿಗಾಗಿ ಲೋಕಸಭಾ ಚುನಾವಣಾ ಪ್ರಚಾರಾಭಿಯಾನದಲ್ಲಿ ತೊಡಗಿಕೊಂಡಿರುವ ಬಗೆಗಿನ ವರದಿಗಳನ್ನು ಅನುಸರಿಸಿ ಕೇಂದ್ರ ಸರಕಾರ ಕೋಲ್ಕತದ ವಿದೇಶೀಯರ ಪ್ರಾದೇಶಿಕ ನೋಂದಾವಣೆ ಅಧಿಕಾರಿಯಿಂದ ವರದಿ ಕೇಳಿರುವುದಾಗಿ ಮೂಲಗಳು ತಿಳಿಸಿವೆ.
ಟಿಎಂಸಿಯ ರಾಯಗಂಜ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕನ್ಹಯ್ಯಲಾಲ್ ಅಗರ್‌ವಾಲ್ ಅವರ ಪರವಾಗಿ ಬಾಂಗ್ಲಾ ನಟ ಫರ್‌ದೂಸ್ ಅಹ್ಮದ್ ಅವರು ಇತರ ಕೆಲ ಭಾರತೀಯ ಚಿತ್ರ ನಟರೊಂದಿಗೆ ಪ್ರಚಾರಾಭಿಯಾನ ನಡೆಸುತ್ತಿದ್ದಾರೆಂಬ ವರದಿಗಳನ್ನು ಅನುಸರಿಸಿ ಕೇಂದ್ರ ಸರಕಾರ ಈ ಕ್ರಮ ತೆಗೆದುಕೊಂಡಿದೆ.
ಬಾಂಗ್ಲಾ ಚಿತ್ರ ನಟ ಫರ್‌ದೂಸ್ ಅಹ್ಮದ್ ಪ್ರಕೃತ ವ್ಯಾಪಾರೋದ್ಯಮ ವೀಸಾದಲ್ಲಿ ಭಾರತಕ್ಕೆ ಬಂದಿರುವುದಾಗಿ ವರದಿಗಳು ತಿಳಿಸಿವೆ.
ಫರ್‌ದೂಸ್ ಅವರು ಭಾರತ-ಬಾಂಗ್ಲಾ ಗಡಿಗೆ ತಾಗಿಕೊಂಡಿರುವ ಹೇಮತಾಬಾದ್ ಮತ್ತು ಕರಂದಿಗಿಯಲ್ಲಿ ಚುನಾವಣಾ ಪ್ರಚಾರ ರಾಲಿಯಲ್ಲಿ ಪಾಲ್ಗೊಂಡು ಅಗರ್‌ವಾಲಾ ಪರವಾಗಿ ಮತ ಯಾಚನೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ್ಞಾನವಾಪಿ ಮಸೀದಿ ಸಮೀಕ್ಷೆ ಪ್ರಕರಣ ವಾರಾಣಸಿ ಕೋರ್ಟ್ ಗೆ ವರ್ಗ: ಸುಪ್ರೀಂ ಆದೇಶ
ಹೈದರಾಬಾದ್ ಅತ್ಯಾಚಾರಿಗಳ ಎನ್ ಕೌಂಟರ್ ‘ಪೊಲೀಸರ ಪೂರ್ವಯೋಜಿತ ಕೃತ್ಯ’: ಸುಪ್ರೀಂ ಗೆ ವರದಿ
ಏರ್ ಇಂಡಿಯಾ ವಿಮಾನದ ಎಂಜಿನ್ ಸ್ಥಗಿತ !: ಮುಂಬೈಯಲ್ಲಿ ತುರ್ತು ಭೂಸ್ಪರ್ಶ
ಹಲ್ಲೆ ಪ್ರಕರಣ: ಶರಣಾಗಲು 2 ವಾರಗಳ ಕಾಲಾವಕಾಶ ಕೊಡಿ: ಸುಪ್ರೀಂಕೋರ್ಟ್ ಗೆ ಸಿಧು
ತಮಿಳುನಾಡು: ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ..!