ನಾಳೆ ಮಧ್ಯಾಹ್ನ ಚಂದ್ರಯಾನ-2

ಸೋಮವಾರ ಉಡಾವಣೆಗೆ ರವಿವಾರ ಸಂಜೆ ಕ್ಷಣಗಣನೆ ಆರಂಭ

Team Udayavani, Jul 21, 2019, 6:00 AM IST

ನವದೆಹಲಿ: ಸೋಮವಾರ ಮಧ್ಯಾಹ್ನ 2.43 ಚಂದ್ರಯಾನ-2 ಉಡಾವಣೆಯಾಗಲಿದೆ.

ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಜು.15ರ ಬೆಳಗಿನ ಜಾವವೇ ನಭಕ್ಕೆ ನೆಗೆಯಬೇಕಿದ್ದ ಜಿಎಸ್‌ಎಲ್ವಿ ಎಂಕೆ 3 ರಾಕೆಟ್, ಸೋಮವಾರ ಮಧ್ಯಾಹ್ನ ಉಡಾವಣೆಗೊಳ್ಳಲಿದೆ. ಈ ರಾಕೆಟ್ ಸೆಪ್ಟೆಂಬರ್‌ 8 ರಂದು ಚಂದ್ರನ ಮೇಲೆ ಇಳಿಯಲಿದೆ.

ಇದಕ್ಕಾಗಿ ವಿವಿಧ ಹಂತಗಳಲ್ಲಿನ ಕಾಲಾವಧಿಯನ್ನು ಕಡಿಮೆ ಮಾಡಲಾಗಿದೆ. ಒಟ್ಟಾರೆ ಚಂದ್ರಯಾನದ ಅವಧಿಯನ್ನು 54 ದಿನಗಳಿಂದ 47 ದಿನಗಳಿಗೆ ಇಳಿಕೆ ಮಾಡಲಾಗಿದೆ. ಚಂದ್ರಯಾನ-2ಗಾಗಿ ಭಾನುವಾರ ಸಂಜೆ 6.43ಕ್ಕೆ ಕ್ಷಣಗಣನೆ ಆರಂಭವಾಗಲಿದೆ. ಇದೇ ವೇಳೆ ಶ್ರೀಹರಿಕೋಟಕ್ಕೆ ತೆರಳಿ ಚಂದ್ರಯಾನ ನೋಡಲು ನೋಂದಣಿ ಮಾಡಿಕೊಳ್ಳುವ ಅವಧಿ ಶನಿವಾರ ಮುಕ್ತಾಯವಾಗಿದೆ.

ಮಂಗಳಯಾನಕ್ಕೆ ಶುಭ ಕೋರಿದ ಇಸ್ರೋ!: ಚಂದ್ರಯಾನ 2 ಕ್ಕೆ ಇಸ್ರೋ ಸಿದ್ಧವಾಗುತ್ತಿರುವ ಮಧ್ಯೆಯೇ ಬಾಲಿವುಡ್‌ನ‌ ‘ಮಂಗಳಯಾನ’ಕ್ಕೂ ಶುಭ ಕೋರಿದೆ! ನಟ ಅಕ್ಷಯ ಕುಮಾರ್‌ ನಾಯಕನಟನಾಗಿರುವ ಮಂಗಳಯಾನ ಕುರಿತ ಸಿನಿಮಾ ಮಿಶನ್‌ ಮಂಗಲ್ಗೆ ಇಸ್ರೋ ಟ್ವೀಟ್ ಮೂಲಕ ಶುಭ ಕೋರಿದೆ. ಇಸ್ರೋ ತಂಡದ ಭಾವನೆಗಳು ಮತ್ತು ಬದ್ಧತೆಯನ್ನು ಮಿಶನ್‌ ಮಂಗಲ್ ಟ್ರೇಲರ್‌ ಪ್ರದರ್ಶಿಸಿದೆ ಎಂದೂ ಇಸ್ರೋ ಮೆಚ್ಚುಗೆ ಸೂಚಿಸಿದೆ. ಇಸ್ರೋದ ಈ ಟ್ವೀಟ್‌ಗೆ ಅಕ್ಷಯ್‌ ಕುಮಾರ್‌ ಧನ್ಯವಾದ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ