ಪತ್ರಕರ್ತನ ಕೊಲೆ ಕೇಸ್ : ಶಹಾಬುದ್ದೀನ್ ವಿರುದ್ಧ ಚಾರ್ಜ್ ಶೀಟ್
Team Udayavani, Jan 29, 2019, 1:53 PM IST
ಪಟ್ನಾ : ಬಿಹಾರದ ಸಿವನ್ ನ ಪತ್ರಕರ್ತ ರಾಜದೇವ್ ರಂಜನ್ ಕೊಲೆ ಕೇಸಿಗೆ ಸಂಬಂಧಿಸಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಮತ್ತು ಇತರ ಏಳು ಮಂದಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.12ಕ್ಕೆ ನಿಗದಿಸಲಾಗಿದೆ.
ಸಿಬಿಐ ಈ ಪ್ರಕರಣದಲ್ಲಿ ಕಳೆದ ವರ್ಷ ಆರ್ಜೆಡಿ ನಾಯಕ ಶಹಾಬುದ್ದೀನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.
2016ರ ಮೇ 13ರಂದು ತನ್ನ ಕಚೇರಿಯಿಂದ ಮರಳುತ್ತಿದ್ದ ವೇಳೆ ಪತ್ರಕರ್ತ ರಾಜ್ದೇವ್ ಅವರನ್ನು ಸಿವನ್ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.