ತಮಿಳು ನಾಡಿನ ರಾಜಾಲಿಯಲ್ಲಿ ಚೇತಕ್ ಕಾಪ್ಟರ್ ಪತನ; ಪೈಲಟ್ ಸುರಕ್ಷಿತ
Team Udayavani, Oct 1, 2018, 12:10 PM IST
ಚೆನ್ನೈ : ಇಂದು ಸೋಮವಾರ ಬೆಳಗ್ಗೆ ತರಬೇತಿ ಹಾರಾಟದಲ್ಲಿದ್ದ ಚೇತಕ್ ಹೆಲಿಕಾಪ್ಟರ್ ತಮಿಳು ನಾಡಿನ ರಾಜಾಲಿ ಎಂಬಲ್ಲಿ ಪತನಗೊಂಡಿರುವುದಾಗಿ ವರದಿಯಾಗಿದೆ.
ತರಬೇತಿ ಹಾರಾಟದಲ್ಲಿದ್ದ ಹೆಲಿಕಾಪ್ಟರ್ ”ಡ್ರೈ ವಿಂಚಿಂಗ್ ಸಾರ್ಟಿ” ಯಲ್ಲಿ ನಿರತವಾಗಿದ್ದ ವೇಳೆ ಅದು ನೆಲಕ್ಕಪ್ಪಳಿಸಿತೆಂದು ಎಎನ್ಐ ವರದಿ ಮಾಡಿದೆ.
ಹೆಲಿಕಾಪ್ಟರ್ ಪತನಗೊಳ್ಳುತ್ತಲೇ ಅದರ ಪೈಲಟ್ ಹೊರ ಜಿಗಿದ ಕಾರಣ ಆತ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿಯಾಗಿದೆ.
ಹೆಲಿಕಾಪ್ಟರ್ನ ಮುಖ್ಯ ಭಾಗ ಮತ್ತು ರೋಟರ್ಗಳು ತೀವ್ರವಾಗಿ ಹಾನಿಗೊಂಡಿವೆ; ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.