ಕಾರು-ಟ್ರಕ್ ಅಪಘಾತ; ಬಾಲನಟ ಸಾವು, ತಂದೆ,ತಾಯಿ ಪ್ರಾಣಾಪಾಯದಿಂದ ಪಾರು

Team Udayavani, Jul 19, 2019, 11:35 AM IST

ರಾಯ್ ಪುರ್: ಕಾರು ಮತ್ತು ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಹಲವಾರು ಜನಪ್ರಿಯ ಹಿಂದಿ ಧಾರವಾಹಿಯಲ್ಲಿ ನಟಿಸಿದ್ದ ಬಾಲ ನಟ ಶಿವ್ ಲೇಖ್ ಸಿಂಗ್(14ವರ್ಷ) ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ಹೊರವಲಯದ ರಾಯ್ ಪುರ್ ನಲ್ಲಿ ನಡೆದಿದೆ.

ಕಾರಿನಲ್ಲಿ ಶಿವ್ ಲೇಖ್ ತಂದೆ, ತಾಯಿ ಕೂಡಾ ಪ್ರಯಾಣಿಸುತ್ತಿದ್ದು, ಇಬ್ಬರೂ ಗಾಯಗೊಂಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಗುರುವಾರ ಬೆಳಗಿನ ಜಾವ ಈ ಅಪಘಾತ ನಡೆದಿದೆ ಎಂದು ರಾಯ್ ಪುರ್ ಪೊಲೀಸ್ ವರಿಷ್ಠಾಧಿಕಾರಿ ಅರಿಫ್ ಶೇಕ್ ಪಿಟಿಐಗೆ ತಿಳಿಸಿದ್ದಾರೆ.

ಬಾಲನಟ ಶಿವ್ ಲೇಖ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಪೋಷಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ವಿವರಿಸಿದೆ. ರಾಯ್ ಪುರ್ ನಿಂದ ಬಿಲಾಸ್ ಪುರಕ್ಕೆ ಹೋಗುತ್ತಿದ್ದ ಸಂದರ್ಧದಲ್ಲಿ ಘಟನೆ ನಡೆದಿದೆ.

ಹಿಂದಿಯ ಧಾರವಾಹಿಯಾದ “ಸಂಕಟ್ ಮೋಚನ್ ಹನುಮಾನ್, ಸಸುರಾಲ್ ಸಿಮಾರ್ ಕಾ ಸೇರಿದಂತೆ ಹಲವು ಸೀರಿಯಲ್ ನಲ್ಲಿ ಶಿವಲೇಖ್ ನಟಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ