14 ಅಯಸ್ಕಾಂತ ನುಂಗಿದ್ದ ಬಾಲಕನಿಗೆ ಪುನರ್ಜನ್ಮ!
Team Udayavani, Apr 24, 2022, 11:00 PM IST
ಅಹ್ಮದಾಬಾದ್: ಬ್ರೇಸ್ಲೈಟ್ನ 14 ಅಯಸ್ಕಾಂತ ಮಣಿಗಳನ್ನು ನುಂಗಿ, ಸಾವಿನ ದವಡೆ ತಲುಪಿದ್ದ 7 ವರ್ಷದ ಪುಟಾಣಿಯನ್ನು ಅಹ್ಮದಾಬಾದ್ನ ಸಿವಿಲ್ ಆಸ್ಪತ್ರೆಯ ವೈದ್ಯರು ರಕ್ಷಿಸಿ, ಪುನರ್ಜನ್ಮ ನೀಡಿದ್ದಾರೆ.
ಮಣಿಗಳನ್ನು ನುಂಗಿದ್ದ ಬಾಲಕ ಏಪ್ರಿಲ್ 10ರಿಂದ ನಿರಂತರವಾಗಿ ವಾಂತಿ ಮಾಡಿಕೊಳ್ಳುತ್ತಿದ್ದ. ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸಲಿಲ್ಲ. ಕೂಡಲೇ ಆತನನ್ನು ಇಲ್ಲಿನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಬಾಲಕನ ಹೊಟ್ಟೆ ಭಾಗವನ್ನು ಸ್ಕ್ಯಾನಿಂಗ್ಗೆ ಒಳಪಡಿಸಿದಾಗ, 13 ಸಣ್ಣ ಸಣ್ಣ ಮಣಿಗಳು ಸಣ್ಣ ಕರುಳಿಗೆ ಚುಚ್ಚಿಕೊಂಡಿರುವುದು ಗಮನಕ್ಕೆ ಬಂತು.
ಶಸ್ತ್ರಚಿಕಿತ್ಸೆ ಮೂಲಕ 13 ಮಣಿಗಳನ್ನು ಹೊರತೆಗೆಯಲಾಯಿತು. ಕಿಬ್ಬೊಟ್ಟೆಯ ಕುಳಿಯೊಳಗೆ ಸೇರಿಕೊಂಡಿದ್ದ ಇನ್ನೊಂದು ಮಣಿಯನ್ನೂ ಹೊರತೆಗೆಯುವಲ್ಲಿ ವೈದ್ಯರು ಸಫಲರಾಗಿದ್ದಾರೆ. ಚೇತರಿಸಿಕೊಂಡಿರುವ ಬಾಲಕನನ್ನು ಡಿಸಾcರ್ಜ್ ಮಾಡಲಾಗಿದೆ.