ಸ್ವದೇಶಕ್ಕೆ ಬಂದ ವಿಶ್ವಸುಂದರಿ ಚಿಲ್ಲರ್
Team Udayavani, Nov 27, 2017, 6:20 AM IST
ಮುಂಬಯಿ/ಹೈದರಾಬಾದ್: ಪ್ರಸಕ್ತ ವರ್ಷದ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಹರ್ಯಾಣದ ಮಾನುಷಿ ಚಿಲ್ಲರ್ ಶನಿವಾರ ರಾತ್ರಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಅಭಿಮಾನಿಗಳು,ಕುಟುಂಬ ಸದಸ್ಯರು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಚಿಲ್ಲರ್, “ಅಭಿಮಾನಿ ಗಳು ಹಾಗೂ ದೇಶದ ಜನತೆಯ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿ. ನನ್ನನ್ನು ಸ್ವಾಗತಿಸಲೆಂದು ಬಂದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಬಯಸುತ್ತೇನೆ’ ಎಂದಿದ್ದಾರೆ.
ನಾಳೆ ಹೈದರಾಬಾದ್‌ನಲ್ಲಿ ಭಾಷಣ: ಇಲ್ಲಿ ಇದೇ 28ರಿಂದ ಆರಂಭವಾಗಲಿರುವ ಜಾಗತಿಕ ಉದ್ಯಮಶೀಲತೆ ಸಮಾ ವೇಶ(ಜಿಇಎಸ್)ದಲ್ಲಿ 2017ರ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಮಾನುಶಿ ಚಿಲ್ಲರ್, ಮಹಿಳಾ ಕ್ರಿಕೆಟ್ ತಾರೆ ಮಿಥಾಲಿ ರಾಜ್, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ. “ವುಮನ್ ಫಸ್ಟ್: ಪ್ರಾಸ್ಪಾರಿಟಿ ಫಾರ್ ಆಲ್’ ಎಂಬ ಶೃಂಗದಲ್ಲಿ ಇವರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ಈ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ
ಭಾರತದಲ್ಲಿ ತಯಾರಾಗುವ ವಿದೇಶಿ ಚಿತ್ರಗಳಿಗೆ ಪ್ರೋತ್ಸಾಹ
MUST WATCH
ಹೊಸ ಸೇರ್ಪಡೆ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ
ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ
ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ